ಬುಕ್​ ಮಾಡಿದ್ದು ಫುಟ್​ಬಾಲ್​ ಬಂದಿದ್ದು ಹೆಂಗಸರ ಒಳಉಡುಪು: ಕಂಪನಿ ಕೊಟ್ಟ ಉತ್ತರಕ್ಕೆ ಗ್ರಾಹಕ ಶಾಕ್​..!

Myntra
Published on

ಭುವನೇಶ್ವರ: ಆನ್​ಲೈನ್​ನಲ್ಲಿ ಬುಕ್​ ಮಾಡಿದ ಪ್ರಾಡಕ್ಟ್​ ಬದಲಾಗಿ ಬೇರೆ ಪ್ರಾಡಕ್ಟ್​ ಕೈ ಸೇರುವ ಸಾಕಷ್ಟು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಫೋನ್​ ಬದಲಿಗೆ ಸೋಪ್​ ಅಥವಾ ಖಾಲಿ ಬಾಕ್ಸ್​ ಪಡೆದುಕೊಂಡಿರುವುದನ್ನು ಕಂಡಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಮಿಂತ್ರಾದಲ್ಲಿ ಗ್ರಾಹಕರೊಬ್ಬರು ಫುಟ್​ಬಾಲ್​ ಬುಕ್​ ಮಾಡಿದ್ದರು. ಆದರೆ, ತಲುಪಿದ ಪ್ರಾಡಕ್ಟ್​ ನೋಡಿ ಗ್ರಾಹಕ ತಬ್ಬಿಬ್ಬಾಗಿದ್ದಾನೆ.

ಒಡಿಶಾ ರಾಜಧಾನಿ ಭುವನೇಶ್ವರದ ನಿವಾಸಿ ಕಶ್ಯಪ್​ ಎಂಬುವರು ಆನ್​ಲೈನ್​ ಶಾಪಿಂಗ್​ ವೇಳೆ ತಮಗಾದ ಕಹಿ ಅನುಭವವನ್ನು ಟ್ವಿಟರ್​ ಮೂಲಕ ತಿಳಿಸಿದ್ದಾರೆ. ಕಶ್ಯಪ್​ ಪುಟ್​ಬಾಲ್​ ಖರೀದಿಸಲು ಮಿಂತ್ರಾ (Myntra)ದಲ್ಲಿ ಆರ್ಡರ್​ ಮಾಡಿದ್ದರು. ನಿಗದಿಯಂತೆ ಕಶ್ಯಪ್​ ಅವರಿಗೆ ಆರ್ಡರ್​ ಅನ್ನು ಡೆಲಿವರಿ ಬಾಯ್​ ಡೆಲಿವರಿ ಮಾಡಿದ್ದಾರೆ. ಆರ್ಡರ್​ ಪಡೆದು ಬಾಕ್ಸ್​ ಓಪನ್​ ಮಾಡಿದ ಕಶ್ಯಪ್​ ಅಕ್ಷರಶಃ ಶಾಕ್​ ಕಾದಿತ್ತು. ಏಕೆಂದರೆ, ಅದರಲ್ಲಿ ಫುಟ್​ಬಾಲ್​ ಬದಲಿಗೆ ಕಪ್ಪು ಬಣ್ಣದ ಬ್ರಾ ಇತ್ತು. ಇದಿಷ್ಟು ಘಟನೆ ಅ.12ರಂದು ನಡೆದಿದೆ. ಇದಾದ ಬಳಿಕ ಕಶ್ಯಪ್​, ಕಸ್ಟಮರ್​ ಕೇರ್​ಗೆ ಕಾಲ್​ ಮಾಡಿ ಮಾಹಿತಿ ತಿಳಿಸಿದ್ದಾರೆ. ಆದರೆ, ಸರಿಯಾಗಿ ಸ್ಪಂದಿಸದ ಕಂಪನಿ ಪ್ರಾಡಕ್ಟ್​ ಬದಲಾಯಿಸಲು ನಿರಾಕರಿಸಿದೆ.

ಅಸಹಾಯಕನಾದ ಕಶ್ಯಪ್​ ಫೋಟೋ ತೆಗೆದು ಅದನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿ ತಮ್ಮ ಅಳಲು ತೊಡಿಕೊಂಡಿದ್ದಾರೆ. ಇದೀಗ ಆ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅನೇಕರು ಫೋಟೋ ನೋಡಿ ಮುಸಿ ಮುಸಿ ನಕ್ಕರೆ, ಇನ್ನು ಕೆಲವರು ಬ್ರಾ ಹೇಗೆ ಬಳಸಬೇಕೆಂದು ಫನ್ನಿಯಾಗಿ ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net