

ಹೈದರಾಬಾದ್: ವೇಗದಲ್ಲಿ ಬಂದ ಬೈಕ್ ಒಂದು ಸೀದಾ ಬಟ್ಟೆ ಅಂಗಡಿಯೊಳಗೆ ನುಗ್ಗಿದ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಸಿಸಿಟಿವಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?: ಬಟ್ಟೆ ಅಂಗಡಿ ಒಳಗೆ ಮೂವರು ಮಹಿಳೆಯರು ಮತ್ತು ಓರ್ವ ಪುರುಷ ಮಾತನಾಡುತ್ತಿರುವಾಗಲೇ, ಇದ್ದಕ್ಕಿದ್ದಂತೆ ಅಂಗಡಿ ಒಳಗೆ ಚಾಲಕನ ನಿಯಂತ್ರಣ ಕಳೆದುಕೊಂಡ ಬೈಕ್ ಧುತ್ತನೇ ನುಗ್ಗುತ್ತದೆ. ತಕ್ಷಣ ಎಚ್ಚೆತ್ತುಕೊಳ್ಳುವ ಗ್ರಾಹಕರು ಒಂದು ಬದಿಗೆ ಸರಿಯುತ್ತಾರೆ. ಇತ್ತ ಬೈಕ್ ಮೇಲಿದ್ದ ಸವಾರ ಹಾರಿ ಬೀಳುತ್ತಾನೆ.
ಅದೃಷ್ಟವಶಾತ್ ಈ ಘಟನೆಯಿಂದ ಯಾರಿಗೂ ಹಾನಿಯಾಗಿಲ್ಲ. ಬೈಕ್ನಿಂದ ಹಾರಿ ಹೋಗಿ ಸೀರೆ ತೋರುವ ಕೌಂಟರ್ ಒಳಗೆ ಬಿದ್ದ ಸವಾರನಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಂದಹಾಗೆ ಈ ಘಟನೆ ತೆಲಂಗಾಣದ ಖಮ್ಮಮ್ ಜಿಲ್ಲೆಯ ರವಿಚೆಟ್ಟು ಬಜಾರ್ನಲ್ಲಿ ನವೆಂಬರ್ 8ರಂದು ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬೈಕ್ನ ಬ್ರೇಕ್ ಫೇಲ್ ಆದ ಕಾರಣ ಈ ಘಟನೆ ಸಂಭವಿಸಿದೆ ಎಂದು ಸವಾರ ತಿಳಿಸಿದ್ದಾನೆ. ಸದ್ಯ ಬೈಕ್ ವಶಕ್ಕೆ ಪಡೆದಿರುವ ಪೊಲೀಸರು ಘಟನೆ ಸಂಬಂಧ ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)