More

    ಪೊಲೀಸರನ್ನು ಕಂಡ್ರೆ ಭಯ ಅನ್ನುವವರು ಈ ಸ್ಟೋರಿ ಓದಿದ್ರೆ ಮನಸ್ಸು ಬದಲಾಯಿಸೋದು ಗ್ಯಾರೆಂಟಿ..!

    ಬೆಂಗಳೂರು: ಸ್ವಾರ್ಥದ ಜೀವನದಲ್ಲಿ ನಾನು ನಂದು ಅಂತ ಬದುಕುವವರೇ ಹೆಚ್ಚು. ಆದರೆ, ಇಲ್ಲೊಬ್ಬ ಪೊಲೀಸ್ ಅಧಿಕಾರಿ ಮಾಡಿದ ಕೆಲಸಕ್ಕೆ ಜನರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.

    ಪೊಲೀಸ್ ಕಂಡ್ರೆ ಭಯೋ ಅನ್ನುವವರು ಈ ಸ್ಟೋರಿ ನೋಡಿದ್ರೆ ತಮ್ಮ ಮನಸ್ಸನ್ನು ಬದಲಾಯಿಸುವುದು ಗ್ಯಾರೆಂಟಿ. ಏಕೆಂದರೆ ಇದು ಎಲ್ಲರ ಮನಕಲಕುವ ಪೊಲೀಸ್​ ಅಧಿಕಾರಿಯೊಬ್ಬರ ಮಾನವೀಯತೆ ಕೆಲಸದ ಕುರಿತಾದ ವಿಶೇಷ ವರದಿ. ಸಿಲಿಕಾನ್ ಸಿಟಿಯಲ್ಲಿ ಭಿಕ್ಷೆ ಬೇಡುವವರನ್ನು ಕಂಡರೆ ಅಸಹ್ಯಪಡುವವರೇ ಹೆಚ್ಚು. ಆದರೆ, ಈ ಸ್ಟೋರಿ ನೋಡಿದ್ರೆ ನಟ ಪುನೀತ್ ರಾಜ್ ಕುಮಾರ್ ಅಭಿನಯದ ಯಾರೇ ಕೂಗಾಡಲಿ ಸಿನಿಮಾ ನೆನಪಿಗೆ ಬರುತ್ತದೆ. ರಸ್ತೆ ಪುಟ್ ಬಾತ್ ಮೇಲೆ ತಟ್ಟೆ ಹಿಡಿದು ನೀರು ನೀರು ಅಂತಾ ಬಿಕ್ಕಳಿಸುತ್ತಿದ್ದ ಭೀಕ್ಷುಕನನ್ನು ನೋಡಿ, ಮಡಿವಾಳ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಶಿವರಾಜ್ ಮಾನವೀಯತೆ ಮೆರೆದು ಆತನ ಬಾಳಿಗೆ ಬೇಳಕು ನೀಡಿದ್ದಾರೆ.

    ಪಾವಗಡ ಮೂಲದ ಶಂಕರ್, ವೃತ್ತಿಯಲ್ಲಿ ಟೈಲರ್. ಜೀವಕ್ಕೆ ಜೀವವಾಗಿದ್ದ ಶಂಕರ್ ಪತ್ನಿ ಎರಡು ವರ್ಷಗಳ ಹಿಂದೆ ಲೋ ಬಿಪಿಯಿಂದ ಸಾವನ್ನಪ್ಪಿದ್ರು. ಇದರಿಂದ ಜೀವನೇ ಬೇಡ ಅಂದುಕೊಂಡಿದ್ದ ಶಂಕರ್, ತನ್ನ ಟೈಲರ್ ವೃತ್ತಿ ಬಿಟ್ಟು, ಊರು ಊರು ಅಲೆಯೋಕೆ ಶುರು ಮಾಡಿದ್ದ. ಭೀಕ್ಷೆ ಬೇಡಿಕೊಂಡು ರಸ್ತೆ ಬದಿಗಳಲ್ಲಿ ಮಲಗಿಕೊಂಡು ಕಾಲ ಕಳೆಯುತ್ತಿದ್ದ. ಆತನನ್ನು ನೋಡಿದ್ರೆ ಎಂತಹವರಿಗೂ ಅಸಹ್ಯ ಪಡುವಂತಾ ಸ್ಥಿತಿಗೆ ತಲುಪಿದ್ದ.

    ಇನ್ನು ಶಂಕರ್ ಒಳ್ಳೆ ಬರಹಗಾರ, ಶ್ಲೋಕಗಳನ್ನ ಸ್ಪಷ್ಟವಾಗಿ ಹೇಳುತ್ತಾರೆ. ಹಲವು ಕವನಗಳನ್ನ ಬರೆದಿದ್ದಾರೆ. ಆತ ಬರೆದಿರುವ ಕವನ, ಶ್ಲೋಕಗಳನ್ನ ಕೇಳಿ ಪಿಎಸ್​ಐ ಶಿವರಾಜ್ ಬೆರಗಾಗಿದ್ದಾರೆ. ಅಲೆಮಾರಿಯಾದ ಮೇಲೆ ಪ್ರತಿನಿತ್ಯ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಇತ್ತ ಶಂಕರ್​ ಹಿನ್ನೆಲೆ ತಿಳಿದ ಪಿಎಸ್​ಐ ಶಿವರಾಜ್​, ಕೇಳಿ ಸಹಾಯಕ್ಕೆ ಮುಂದಾದರು.

    ಇದೀಗ ಭಿಕ್ಷುಕನಿಗೂ ಉದ್ಯೋಗ ಕಲ್ಪಿಸಿ, ಬದುಕು ಕಟ್ಟಿಕೊಳ್ಳಲು ಪಿಎಸ್​ಐ ಶಿವರಾಜ್​ ಆಸರೆ ಆಗಿದ್ದಾರೆ. ಭಿಕ್ಷುಕನಿಗೆ ಕಟಿಂಗ್, ಶೇವಿಂಗ್ ಮಾಡಿಸಿ, ಎರಡು ಜತೆ ಹೊಸ ಬಟ್ಟೆ ಕೊಡಿಸಿ, ಹೋಟೆಲ್​ನಲ್ಲಿ ಹೊಟ್ಟೆ ತುಂಬಾ ಊಟ ಕೊಟ್ಟು ಠಾಣೆಗೆ ಕರೆತಂದು, ಬದುಕಿನ ದಾರಿ ತೋರಿಸಿದ್ದಾರೆ. ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಶಂಕರ್​ಗೆ ಟೈಲರ್ ಕೆಲಸ ಕೊಡಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪಿಎಸ್​ಐ ಸಹಾಯ ಮಾಡಿದ್ದಾರೆ.

    ಜೀವನವೇ ಬೇಡ ಅಂತ ಬೇಸತ್ತಿದ್ದವನಿಗೆ, ಜೀವನದ ಹಾದಿ ತೋರಿಸಿ ಮಾನವೀಯತೆ ಮೇರೆದ ಸಂಚಾರಿ ಪಿಎಸ್ಐ ಶಿವರಾಜ್ ಅವರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್​)

    ಆಂಧ್ರ ಹುಡುಗಿ-ಐರ್ಲೆಂಡ್​ ಹುಡುಗ: ದೇಶ, ಭಾಷೆ, ಧರ್ಮದ ಗಡಿ ಮೀರಿದ ವಿಶೇಷ ಪ್ರೇಮ ಕತೆ ಇದು

    ಏನೇ ನಡೆದಿದ್ರೂ ಅವನೊಬ್ಬನಿಗೆ ಮಾತ್ರ ಗೊತ್ತಿರುತ್ತದೆ! ಪುನೀತ್ ಸಾವಿನ ಅನುಮಾನದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

    2020ರಲ್ಲಿ ಪ್ರತಿದಿನ 34 ವಿದ್ಯಾರ್ಥಿಗಳು ಆತ್ಮಹತ್ಯೆ; ಕರ್ನಾಟಕದಲ್ಲೂ ಅಧಿಕ ಆತ್ಮಹತ್ಯೆ, ಕೋವಿಡ್ ಮಾತ್ರೆಗೆ ಶೀಘ್ರ ಸಮ್ಮತಿ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts