ಚಂದ್ರಯಾನ-3; ಲಿಮಿಟೆಡ್​ ಬಜೆಟ್​ನಲ್ಲಿ ಭಾರತ ಈ ಯಶಸ್ಸನ್ನು ನಿರ್ವಹಿಸಿದೆ: ಭಾವನಾತ್ಮಕ ವಿಡಿಯೋ ಹಂಚಿಕೊಂಡ ನಟ ಆರ್. ಮಾಧವನ್

Untitled design (52)
Published on

ನವದೆಹಲಿ: ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆಯ ‘ಚಂದ್ರಯಾನ-3’ ಮಿಷನ್​ನ ವಿಕ್ರಮ್​ ಲ್ಯಾಂಡರ್​ ಇಂದು ಯಶಸ್ವಿಯಾಗಿ ಲ್ಯಾಂಡ್​ ಆಗಿದ್ದು, ಇಡೀ ದೇಶವೇ ಈ ಯಶಸ್ಸನ್ನು ಹಬ್ಬದಂತೆ ಸಂಭ್ರಮಿಸುತ್ತಿದೆ. ದೇಶದ ಜನಸಾಮಾನ್ಯರು ಸೇರಿದಂತೆ ಗಣ್ಯ ವ್ಯಕ್ತಿಗಳು ಇಸ್ರೋ ಸಾಧನೆಗೆ ವ್ಯಾಪಕ ಅಭಿನಂದನೆ ಸಲ್ಲಿಸಿದ್ದಾರೆ. ಈ ಮಧ್ಯೆ ಬಾಲಿವುಡ್​ ನಟ ಆರ್. ಮಾಧವನ್​ ಭಾವನಾತ್ಮಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಚಂದ್ರನ ಮೇಲೆ ವಿಕ್ರಮ್​ ಲ್ಯಾಂಡರ್​ ಅನ್ನು ಸಕ್ಸೆಸ್​​ಫುಲ್​ ಲ್ಯಾಂಡಿಂಗ್​ ಮಾಡಿದ ಇಸ್ರೋ ಸಂಸ್ಥೆಯ ಸಾಧನೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಾಹ್ಯಾಕಾಶ ಮುಖ್ಯಸ್ಥರಿಗೆ ದೂರವಾಣಿ ಕರೆ ಮುಖೇನ ಅಭಿನಂದನೆ ತಿಳಿಸಿದರು. ಆಗಸ್ಟ್ 23 ರಂದು ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್​ ಲ್ಯಾಂಡಿಂಗ್​ ಅನ್ನು ಯಶಸ್ವಿಗೊಳಿಸಿರುವ ಸಂಗತಿ ಇದೀಗ ಒಂದು ಶತಕೋಟಿಗೂ ಹೆಚ್ಚು ಜನರಿಗೆ ಹೆಮ್ಮೆಯ ಕ್ಷಣವಾಗಿದೆ.

ಇಸ್ರೋ ಸಂಸ್ಥೆಯ ಈ ಸಾಧನೆಯನ್ನು ಕೊಂಡಾಡಿದ ಆರ್. ಮಾಧವನ್, ಈ ಸಂತೋಷ ಮತ್ತು ಹೆಮ್ಮೆಯ ಕ್ಷಣವನ್ನು ಭಾವನಾತ್ಮಕ ವಿಡಿಯೋ ಪೋಸ್ಟ್ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ. "ಇದು ನನಗೆ ಮಾತ್ರವಲ್ಲ, ಇಸ್ರೋ ವಿಜ್ಞಾನಿಗಳಿಗೂ ಮಾತ್ರವಲ್ಲದೆ ಇಡೀ ಜಗತ್ತಿಗೆ ಹೆಮ್ಮೆಯ ಸಂಗತಿಯಾಗಿದೆ. ಭಾರತದ ಬಾಹ್ಯಾಕಾಶ ಸಂಸ್ಥೆಗೆ ವಿಶೇಷ ಅಭಿನಂದನೆಗಳು. ಎಂತಹ ಸಾಧನೆ ಇದು! ನಾನು ತುಂಬಾ ಸಂತೋಷ ಮತ್ತು ಹೆಮ್ಮೆ ಪಡುತ್ತೇನೆ. ಬಾರತವು ಬಹಳ ಸೀಮಿತ ಬಜೆಟ್​ನಲ್ಲಿ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್​ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net