VIDEO| MAA elections: ನಟ ಮಂಚು ವಿಷ್ಣು-ಪ್ರಕಾಶ್​ ರಾಜ್​ ಬಣಗಳ ನಡವೆ ಬಹಿರಂಗ ಕಿತ್ತಾಟ

Clash
Published on

ಹೈದರಾಬಾದ್​: ತೆಲಗು ಚಿತ್ರರಂಗದಲ್ಲಿ ನಡೆಯುತ್ತಿರುವ ಚಲನಚಿತ್ರ ಕಲಾವಿದರ ಸಂಘ (MAA) ದ ಚುನಾವಣೆ ಅಖಾಡವೂ ಅಕ್ಷರಶಃ ರಣರಂಗವಾಗಿದೆ. ಚುನಾವಣೆಗಾಗಿ ನಟರು ಬಹಿರಂಗವಾಗಿಯೇ ಕಿತ್ತಾಡಿಕೊಂಡಿದ್ದಾರೆ.

ನಟ ಮಂಚು ವಿಷ್ಣು ಹಾಗೂ ಪ್ರಕಾಶ್ ರೈ ಬಣದ‌ ನಡುವೆ ಕಿತ್ತಾಟ ನಡೆದಿದೆ. ಮೋಹನ್ ಬಾಬು ಹಾಗೂ ಬ್ಯಾನರ್ಜಿ ಮತ್ತು ಶಿವ ಬಾಲಾಜಿ ಹಾಗೂ ಸಮೀರ್ ಮಧ್ಯ ಗಲಾಟೆ ನಡೆದಿದ್ದು, ತಾತ್ಕಾಲಿಕವಾಗಿ ಮಧ್ಯಾಹ್ನ 2 ಗಂಟೆಯವರೆಗೂ ಮತದಾನ ಸ್ಥಗಿತವಾಗಿದೆ.

ಮತದಾನ ಕೇಂದ್ರದ ಒಳಗೆ ಪ್ರಚಾರ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಎರಡು ಬಣಗಳ ನಡುವೆ ಕಿತ್ತಾಟ ನಡೆದಿದೆ. ಮತ ಚಲಾವಣೆಯಲ್ಲೂ ವಂಚನೆ ನಡೆಯುತ್ತಿರುವ ಆರೋಪಗಳು ಕೇಳಿಬಂದಿದೆ. ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಮೂಡಿತ್ತು.

ಈಗಾಗಲೇ ನಟ ಪವನ್​ ಕಲ್ಯಾಣ್​ ಮತ್ತು ಚಿರಂಜೀವಿ ಸೇರಿದಂತೆ ಅನೇಕರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಎರಡು ಕಡೆ ಸಮ ಹೋರಾಟ ಇದೆ. ಯಾರು ಗೆಲ್ಲುತ್ತಾರೆಂದು ಹೇಳುವುದು ಕಷ್ಟ ಎಂದು ಪವನ್​ ಕಲ್ಯಾಣ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net