ಗೃಹ ಬಳಕೆಯ LPG ಸಿಲಿಂಡರ್ ದರದಲ್ಲಿ ಮತ್ತೆ ಏರಿಕೆ: ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ

LPG
Published on

ನವದೆಹಲಿ: ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಬರೆಯ ಗಾಯ ಇನ್ನೂ ಹಸಿಯಾಗಿರುವಗಲೇ ಮತ್ತೊಂದು ಬರೆ ಬಿದ್ದಿದೆ. ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್​ ಬೆಲೆಯಲ್ಲಿ ಇಂದು (ಮೇ.19) ಮತ್ತೆ 3.50 ರೂಪಾಯಿ ಹೆಚ್ಚಳವಾಗಿದೆ. ಗೃಹ ಬಳಕೆ ಮಾತ್ರವಲ್ಲದೆ, ವಾಣಿಜ್ಯ ಬಳಕೆಯ ಸಿಲಿಂಡರ್​ ಬೆಲೆಯಲ್ಲಿ 8 ರೂಪಾಯಿ ಹೆಚ್ಚಳವಾಗಿದೆ. ಈ ತಿಂಗಳಲ್ಲಿ ಎರಡನೇ ಬಾರಿಗೆ ಬೆಲೆ ಏರಿಕೆಯಾಗಿದ್ದು, ಜನರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ.

ಮೇ. 7ರಂದು 50 ರೂಪಾಯಿ ಹೆಚ್ಚಳವಾಗಿತ್ತು. ಇಂದು ಮತ್ತೆ 3.50 ರೂಪಾಯಿ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 999.50 ರೂಪಾಯಿ ಇದ್ದ 14.2 ಕೆಜಿ ತೂಕದ ಸಿಲಿಂಡರ್​ ಬೆಲೆ ಇದೀಗ 1003 ರೂಪಾಯಿ ಆಗಿದೆ. ಕೊಲ್ಕತದಲ್ಲಿ 1029 ರೂ. ಇದ್ದರೆ, ಚೆನ್ನೈನಲ್ಲಿ 1018 ರೂಪಾಯಿಗೆ ತಲುಪಿದೆ.

ವಾಣಿಜ್ಯ ಬಳಕೆಯ ಸಿಲಿಂಡರ್​ ದರದಲ್ಲಿ 8 ರೂಪಾಯಿ ಏರಿಕೆ ಆಗಿದ್ದು, ದೆಹಲಿಯಲ್ಲಿ 19 ಕೆಜಿ ಎಲ್​ಪಿಜಿ ಸಿಲಿಂಡರ್ ಈಗ 2,354 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಕೋಲ್ಕತ್ತಾದಲ್ಲಿ 2,454, ಮುಂಬೈನಲ್ಲಿ 2,306 ಮತ್ತು ಚೆನ್ನೈನಲ್ಲಿ 2,507 ರೂ.ಗೆ ಮಾರಾಟವಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net