

ವಿಶಾಖಪಟ್ಟಣ: ಭಾರತೀಯ ಬಾಹಾಕ್ಯಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ತನ್ನ ಮೊದಲ ಅತ್ಯಂತ ಚಿಕ್ಕದಾದ ರಾಕೆಟ್ ಅನ್ನು ಭಾನುವಾರ (ಆ. 7) ಬೆಳಗ್ಗೆ ಆಂಧ್ರ ಪ್ರದೇಶದ ವಿಶಾಖಪಟ್ಟಣದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿತು.
ಎಸ್ಎಸ್ಎಲ್-ಡಿ1 ಹೆಸರಿನ ಚಿಕ್ಕ ರಾಕೆಟ್, ಭೂ ವೀಕ್ಷಣೆ ಉಪಗ್ರಹ (ಇಒಎಸ್-02) ಮತ್ತು ವಿಧ್ಯಾರ್ಥಿ ನಿರ್ಮಿತ ಉಪಗ್ರಹ ಅಜಾದಿಸ್ಯಾಟ್ ಅನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಹೊತ್ತು ನಭಕ್ಕೆ ಜಿಗಿಯಿತು.
ವಿಶೇಷವೇನೆಂದರೆ, ಇಸ್ರೋ ಇದೇ ಮೊದಲ ಬಾರಿಗೆ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್‌ಎಸ್‌ಎಲ್‌ವಿ) ದಿಂದ ಸಣ್ಣ ರಾಕೆಟ್ ಅನ್ನು ಉಡಾವಣೆ ಮಾಡಿದೆ, ಇದನ್ನು ಭೂಮಿಯ ಕಡಿಮೆ ಕಕ್ಷೆಯಲ್ಲಿ ಉಪಗ್ರಹಗಳನ್ನು ನಿಯೋಜಿಸಲು ಬಳಸಲಾಗುತ್ತದೆ.
ಸ್ವಾತಂತ್ರ್ಯ ದಿನದ 75ನೇ ವರ್ಷದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 750 ಶಾಲೆ ಬಾಲಕಿಯರು ನಿರ್ಮಿಸಿದ ಉಪಗ್ರಹವನ್ನು ಎಸ್ಎಸ್ಎಲ್-ಡಿ1 ಹೊತ್ತು ಸಾಗಿದೆ. ಎಸ್‌ಎಸ್‌ಎಲ್‌ವಿ 34 ಮೀ. ಎತ್ತರವಾಗಿದ್ದು, ಪಿಎಸ್‌ಎಲ್‌ವಿ ಗಿಂತ ಸುಮಾರು 10 ಮೀ ಕಡಿಮೆ ಇದೆ. ಪಿಎಸ್ಎಲ್ವಿಯ 2.8 ಮೀಟರ್‌ಗಳಿಗೆ ಹೋಲಿಸಿದರೆ ಎರಡು ಮೀಟರ್‌ಗಳಷ್ಟು ವಾಹನದ ವ್ಯಾಸವನ್ನು ಹೊಂದಿದೆ.
ಎಸ್‌ಎಸ್‌ಎಲ್‌ವಿ 120 ಟನ್‌ಗಳ ಲಿಫ್ಟ್-ಆಫ್ ದ್ರವ್ಯರಾಶಿಯನ್ನು ಹೊಂದಿದ್ದರೆ, ಪಿಎಸ್‌ಎಲ್‌ವಿ 320 ಟನ್‌ಗಳನ್ನು ಹೊಂದಿದೆ, ಇದು 1,800 ಕೆಜಿಯಷ್ಟು ಪೇಲೋಡ್‌ಗಳನ್ನು ಸಾಗಿಸಬಲ್ಲದು. (ಏಜೆನ್ಸೀಸ್)