ರಾಷ್ಟ್ರೀಯ ಭದ್ರತೆಗೆ ಮಾರಕ: ಚೀನಾ 54 ಆ್ಯಪ್​ಗಳನ್ನು ಬ್ಯಾನ್​ ಮಾಡಿದ ಕೇಂದ್ರ ಸರ್ಕಾರ

Apps
Published on

ನವದೆಹಲಿ: ರಾಷ್ಟ್ರೀಯ ಭದ್ರತೆಗೆ ಮಾರಕ ಅನಿಸಿರುವ ಚೀನಾದ 54 ಆ್ಯಪ್​ಗಳನ್ನು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೋಮವಾರ (ಫೆ.14) ಬ್ಯಾನ್​ ಮಾಡಿದೆ.

ಬ್ಯೂಟಿ ಕ್ಯಾಮೆರಾ: ಸ್ವೀಟ್​ ಸೆಲ್ಫಿ ಎಚ್​ಡಿ, ಬ್ಯೂಟಿ ಕ್ಯಾಮೆರಾ-ಸೆಲ್ಫಿ ಕ್ಯಾಮೆರಾ, ಈಕ್ವಲೈಜರ್​ ಮತ್ತು ಬಾಸ್​ ಬೂಸ್ಟರ್​, ಕ್ಯಾಕ್​ಕಾರ್ಡ್​ ಫಾರ್​ ಸೇಲ್ಸ್​ಫೋರ್ಸ್​ ಇಎನ್​ಟಿ, ಐಸೋಲ್ಯಾಂಡ್​ 2: ಆ್ಯಶಸ್​ ಆಫ್​ ಟೈಮ್​ ಲೈಟ್​, ವಿವಾ ವಿಡಿಯೋ ಎಡಿಟರ್​, ಟೆನ್ಸೆಂಟ್​ ರಿವರ್​, ಆನ್​ಮ್ಯೊಜಿ ಚೆನ್​, ಆನ್​ಮ್ಯೊಜಿ ಅರೇನಾ, ಆ್ಯಪ್​ಲಾಕ್​ ಮತ್ತು ಡ್ಯುಯಲ್​ ಸ್ಪೇಸ್​ ಲೈಟ್​ ಸೇರಿದಂತೆ ಒಟ್ಟು 54 ಆ್ಯಪ್​ಗಳನ್ನು ಕೇಂದ್ರ ಸರ್ಕಾರ ಬ್ಯಾನ್​ ಮಾಡಿದೆ.

ಜೂನ್​ 2020ರಿಂದ ಪ್ರಖ್ಯಾತ ಆ್ಯಪ್​ಗಳಾದ ಟಿಕ್​ಟಾಕ್​, ಶೇರ್​ಇಟ್​, ವೀಚಾಟ್​, ಹೆಲೋ, ಲೈಕೀ, ಯುಸಿ ನ್ಯೂಸ್​, ಬಿಗೋ ಲೈವ್​​​, ಯುಸಿ ಬ್ರೌಸರ್​, ಇಎಸ್​ ಫೈಲ್​ ಎಕ್ಸ್​ಪ್ಲೋರರ್​ ಮತ್ತು ಎಂಐ ಕಮ್ಯೂನಿಟಿ ಸೇರಿದಂತೆ ಚೀನಾದ 224 ಚೀನಾ ಆ್ಯಪ್​ಗಳನ್ನು ಸರ್ಕಾರ ಬ್ಯಾನ್​ ಮಾಡಿದೆ.

ತಂತ್ರಜ್ಞಾನ ಸಚಿವಾಲಯ ಪ್ರಕಾರ ಈಗ ಬ್ಯಾನ್​ ಮಾಡಲು ಮುಂದಾಗಿರುವ 54 ಆ್ಯಪ್​ಗಳಲ್ಲಿ ಈ ಹಿಂದೆ ಬ್ಯಾನ್​ ಆಗಿದ್ದ ಆ್ಯಪ್​ಗಳು ಸೇರಿವೆ. ಏಕೆಂದರೆ, ಈ ಹಿಂದೆ ಬ್ಯಾನ್​ ಮಾಡಲಾಗಿದ್ದ ಆ್ಯಪ್​ಗಳನ್ನು ಹೊಸ ಹೆಸರಿನಲ್ಲಿ ಮತ್ತೆ ಲಾಂಚ್​ ಮಾಡಲಾಗಿದೆ. ಹೀಗಾಗಿ ಅಂತಹ ಆ್ಯಪ್​ಗಳು ಸೇರಿದಂತೆ ಒಟ್ಟು 54 ಆ್ಯಪ್​ಗಳನ್ನು ಸರ್ಕಾರ ಬ್ಯಾನ್ ಮಾಡಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net