ಜೂನಿಯರ್​ ​ಆರ್ಟಿಸ್ಟ್ ಅರೆಬೆತ್ತಲೆ ಫೋಟೋ ಹರಿಬಿಟ್ಟು ವೇಶ್ಯಾವಾಟಿಕೆ: ಫಿಲ್ಮ್​ ಪ್ರೊಡಕ್ಷನ್​ ಮ್ಯಾನೇಜರ್​ ಬಂಧನ!

J.Artist
Published on

ಹೈದರಾಬಾದ್​: ಸಿನಿಮಾ ಇಂಡಸ್ಟ್ರಿಯಲ್ಲಿ ಪರಿಚಯವಿದ್ದ ಜೂನಿಯರ್​ ಆರ್ಟಿಸ್ಟ್ ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಸಿನಿಮಾ ಪ್ರೊಡಕ್ಷನ್​ ಮ್ಯಾನೇಜರ್​ನನ್ನು ಹೈದರಾಬಾದ್​ನ ಸರೋರ್​ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಸುಧೀರ್​ (31) ಎಂದು ಗುರುತಿಸಲಾಗಿದೆ. ಈತ ಕರೊನಾ ಲಾಕ್​ಡೌನ್​ ಸಮಯದಲ್ಲಿ ರಹಸ್ಯವಾಗಿ ದಂಧೆ ನಡೆಸುತ್ತಿದ್ದ. ಯುವಕರನ್ನು ಸೆಳೆಯಲು ಜಾಲತಾಣದಲ್ಲಿ ಮಹಿಳೆಯರ ಅರೆಬೆತ್ತಲೆ ಫೋಟೋ ಹಾಕುತ್ತಿದ್ದ ಎಂದು ತಿಳಿದುಬಂದಿದೆ.

ಖಮ್ಮಮ್​ ಜಿಲ್ಲೆಯ ಸತ್ತುಪಲ್ಲಿ ಮೂಲದ ಸುಧೀರ್​, 10 ವರ್ಷಗಳ ಹಿಂದೆ ಹೈದರಾಬಾದ್​ಗೆ ಬಂದು ಮಧಪುರ್​ನಲ್ಲಿ ನೆಲೆಸಿದರು. ಸಿನಿಮಾ ಪ್ರೊಡಕ್ಷನ್​ನಲ್ಲಿ ಮ್ಯಾನೇಜರ್​ ಕಾರ್ಯನಿರ್ವಹಿಸುತ್ತಿರುವ ಸುಧೀರ್​, ತನಗೆ ಪರಿಚಯವಿದ್ದ ಕಿರಿಯ ಕಲಾವಿದರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸಲು ಶುರು ಮಾಡಿದನು.

ದಂಧೆ ನಡೆಸಲೆಂದೇ ಮಧಪುರ್​ನ ಅಯ್ಯಪ್ಪ ಸೊಸೈಟಿಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದಿದ್ದ. ಯುವಕರನ್ನು ಸೆಳೆಯಲೆಂದೇ ಲೊಕೆಂಟೋ ಡೇಟಿಂಗ್​ ವೆಬ್​ಸೈಟ್​ನಲ್ಲಿ ಹುಡುಗಿಯರ ಅರೆಬೆತ್ತಲೇ ಫೋಟೋಗಳನ್ನು ಪೋಸ್ಟ್​ ಮಾಡುತ್ತಿದ್ದ. ಫೋನ್​ ಮೂಲಕ ಸಂಪರ್ಕಿಸಿ ವ್ಯವಹಾರ ನಡೆಸುತ್ತಿದ್ದ.

ಈ ಬಗ್ಗೆ ಮಾಹಿತಿ ಪಡೆದುಕೊಂಡ ರಾಚಕೊಂಡ ಮಾನವ ಕಳ್ಳಸಾಗಾಣೆ ವಿರೋಧಿ ಘಟಕ (ಎಎಚ್​ಟಿಯು)ದ ಪೊಲೀಸರು ಸರೋರ್​ ನಗರ ಠಾಣೆಗೆ ಮಾಹಿತಿ ನೀಡಿ ಸುಧೀರ್​ನನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net