ಪತ್ನಿಯನ್ನು ಕೊಂದ ಬಳಿಕ ಪತಿ ಮಾಡಿದ್ದನ್ನು ಕೇಳಿದ್ರೆ ಶಾಕ್​ ಆಗ್ತೀರಾ! ಇಡೀ ಊರೇ ಬೆಚ್ಚಿಬಿದ್ದ ಘಟನೆ ಇದು

Man RJ
Published on

ಜೈಪುರ: ಪತ್ನಿಯನ್ನು ಕೊಂದ ಪಾಪಿ ಪತಿರಾಯನೊಬ್ಬ ಆಕೆಯ ಮೃತದೇಹವನ್ನು ರಸ್ತೆಯಲ್ಲಿ ಧರಧರನೇ ಎಳೆದಾಡಿದ ಆತಂಕಕಾರಿ ಘಟನೆ ರಾಜಸ್ಥಾನದ ಪೋರ್ಟ್​ ಒಂದರಲ್ಲಿ ಮಂಗಳವಾರ ನಡೆದಿದೆ.

ಆರೋಪಿಯನ್ನು ಪಿಂಟು ಅಲಿಯಾಸ್​ ಸುನೀಲ್​ ವಲ್ಮಿ ಎಂದು ಗುರುತಿಸಲಾಗಿದೆ. ಈತ ರಾಜಸ್ಥಾನದ ಕೋಟಾ ಜಿಲ್ಲೆಯ ಭಟಪದಾ ಏರಿಯಾದವನು. ಸುನೀಲ್​ 15 ವರ್ಷಗಳ ಹಿಂದೆ ಸೀಮಾ ಎಂಬಾಕೆಯನ್ನು ಮದುವೆ ಆಗಿದ್ದ. ಇಬ್ಬರ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದಾರೆ.

ಕೆಲವು ವರ್ಷಗಳಿಂದ ಪತಿ ಮತ್ತು ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ, ಮಂಗಳವಾರ ತಾರಕ್ಕಕ್ಕೇರಿದ ಇಬ್ಬರ ಜಗಳದಲ್ಲಿ ತಾಳ್ಮೆ ಕಳೆದುಕೊಂಡ ಸುನೀನ್​ ಕೊಡಲಿಯಿಂದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದ ಆರೋಪಿ ಸುನೀಲ್​ ಪತ್ನಿಯ ಮೃತದೇಹವನ್ನು ಸುಮಾರು 70 ರಿಂದ 80 ಮೀಟರ್​ ರಸ್ತೆಯಲ್ಲಿ ಎಳೆದಾಡಿದ್ದಾನೆ. ಅಕ್ಕಪಕ್ಕ ಮನೆಯವರು ಈ ಭಯಾನಕ ದೃಷ್ಯವನ್ನು ನೋಡಿ ಹೆದರಿದ್ದಾರೆ. ಬಳಿಕ ಶವವನ್ನು ರಸ್ತೆಯಲ್ಲಿ ಬಿಟ್ಟು ಸುನೀಲ್​ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪತ್ನಿ ಮೇಲಿನ ದಾಳಿಯಲ್ಲಿ ಕಿರಿಯ ಮಗನಿಗೂ ದಾಳಿಯಾಗಿದ್ದು, ಆತನು ಸಹ ಚಿಕಿತ್ಸೆ ಫಲಿಸದೇ ಬುಧವಾರ ಮೃತಪಟ್ಟಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net