

ಅಹಮದಾಬಾದ್: ಹದಿನೇಳು ವರ್ಷದ ಹುಡುಗನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಮಾಡಿದ ಆರೋಪದಲ್ಲಿ 23 ವರ್ಷದ ಮಹಿಳೆಯನ್ನು ಬಂಧಿಸಿ, ಪೊಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಗುಜರಾತ್ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಗುಜರಾತಿನ ಆನಂದ್ ಮೂಲದ 17 ವರ್ಷದ ಹುಡುಗ ಮೇ 25ರಿಂದ ನಾಪತ್ತೆಯಾಗಿದ್ದ. ಸಾಕಷ್ಟು ಹುಡುಕಾಡಿ, ಪತ್ತೆಹಚ್ಚಲು ಸಾಧ್ಯವಾಗದಿದ್ದಾಗ ಕುಟುಂಬಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರಿ ನಾಪತ್ತೆ ದೂರು ದಾಖಲಿಸಿದ್ದರು.
ದೂರು ಸ್ವೀಕರಿಸಿ ಕಾರ್ಯಾಚರಣೆಗಿಳಿದ ಪೊಲೀಸರು ದೂರು ನೀಡಿದ ಹದಿನೈದು ದಿನಗಳ ಬಳಿಕ ಸೂರತ್ನಲ್ಲಿ ಹುಡುಗನನ್ನು ಪತ್ತೆಹಚ್ಚಿದ್ದಾರೆ. ಮದುವೆ ಆಗುವುದಾಗಿ ನಂಬಿಸಿ ಗುಜರಾತ್ನ ಆನಂದ್ದಿಂದ ಸೂರತ್ಗೆ ಮಹಿಳೆ ಕರೆದೊಯ್ದಿದ್ದಳು. ಇನ್ನು ವಿಚಾರಣೆ ವೇಳೆ ಹುಡುಗನ ಜತೆ ನಿರಂತರವಾಗಿ ದೈಹಿಕ ಸಂಪರ್ಕ ಬೆಳೆಸಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ.
ಸದ್ಯ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. (ಏಜೆನ್ಸೀಸ್)