ಅರಣ್ಯಾಧಿಕಾರಿ ಕರೆದರೆಂದು ಕ್ವಾರ್ಟರ್ಸ್​ಗೆ ಹೋದ ಅಮಾಯಕ ಬುಡಕಟ್ಟು ಯುವತಿಗೆ ಕಾದಿತ್ತು ಶಾಕ್​!

Forest Officer
Published on

ಮಲ್ಕಂಗಿರಿ (ಒಡಿಶಾ): ಸರ್ಕಾರಿ ಅಧಿಕಾರಿಯೊಬ್ಬ ಅಮಾಯಕ ಯುವತಿಯನ್ನು ನಂಬಿಸಿ ವಂಚಿಸಿ, ಬಂಧಕ್ಕೀಡಾಗಿರುವ ಘಟನೆ ಒಡಿಶಾದ ಮಲ್ಕಂಗಿರಿಯಲ್ಲಿ ನಡೆದಿದೆ.

ಬಂಧಿತನನ್ನು ಅರಣ್ಯಾಧಿಕಾರಿ ಮುರಳೀಧರ್​ ಎಂದು ಗುರುತಿಸಲಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ.

ಕಳೆದ ಏಪ್ರಿಲ್​ ತಿಂಗಳಲ್ಲಿ ಬುಡಕಟ್ಟು ಜನಾಂಗದ ಅಮಾಯಕ ಯುವತಿಯನ್ನು ಆರೋಪಿ ಮುರಳೀಧರ್​ ತನ್ನ ಕ್ವಾರ್ಟರ್ಸ್​ಗೆ ಕರೆಸಿಕೊಂಡಿದ್ದಾನೆ. ಬಂದವಳ ಬಳಿ ಬೆಣ್ಣೆಯಂತಹ ಮಾತುಗಳನ್ನಾಡಿದ್ದಾನೆ. ನಿನ್ನಂತಹ ಯುವತಿಯನ್ನೇ ನಾನು ಮದುವೆ ಆಗಬೇಕೆಂದುಕೊಂಡಿದ್ದೇನೆ. ನೀನು ಬಯಸಿದರೆ ಇಬ್ಬರು ಮದುವೆ ಆಗೋಣ ಎಂದಿದ್ದಾನೆ.

ಆರೋಪಿಯ ಮಾತಿಗೆ ಸಂತ್ರಸ್ತ ಯುವತಿ ಮರುಳಾಗಿದ್ದಾಳೆ. ಇದನ್ನು ಬಂಡವಾಳ ಮಾಡಿಕೊಂಡ ಮುರಳೀಧರ್​, ಪ್ರೀತಿಯ ಹೆಸರಲ್ಲಿ ಆಕೆ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಕೆಲವು ದಿನಗಳ ಹಿಂದೆ ಮುರಳೀಧರ ಮತ್ತೊಂದು ಮದುವೆ ಆಗಿದ್ದಾನೆ. ಬಳಿಕ ಈ ವಿಚಾರ ಸಂತ್ರಸ್ತ ಯುವತಿಗೆ ತಿಳಿದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುರಳೀಧರನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net