ಮೀಸಲು ಅರಣ್ಯದೊಳಗೆ ನುಗ್ಗಿ ಕಾಡಾನೆಯನ್ನು ಕೆಣಕಿದ ಲೇಡಿ ಯೂಟ್ಯೂಬರ್​ಗೆ ಬಿಗ್​ ಶಾಕ್​!

Lady Youtuber
Published on

ಕೊಲ್ಲಂ: ಕೇರಳದ ಮಂಪಝತಾರಾ ಮೀಸಲು ಅರಣ್ಯ ಪ್ರದೇಶದ ಒಳಗೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೆ, ಕಾಡಾನೆಯನ್ನು ಕೆರಳಿಸಿದ ಆರೋಪದ ಮೇಲೆ ಮಹಿಳಾ ಯೂಟ್ಯೂಬರ್ ವಿರುದ್ಧ ಜಾಮೀನು ರಹಿತ ಅಪರಾಧ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಅಮಲಾ ಅನು ಎಂದು ಗುರುತಿಸಲಾಗಿದೆ. ಈಕೆ ಕಿಲಿಮನೂರಿನ ನಿವಾಸಿ. ಕಾಡಾನೆಯನ್ನು ಕೆರಳಿಸಿದ್ದಲ್ಲದೆ, ಹಲಿಕ್ಯಾಮ್​ ಮೂಲಕ ದೃಶ್ಯ ಸೆರೆಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪ ಈಕೆಯ ವಿರುದ್ಧ ಕೇಳಿಬಂದಿದೆ. ಹೀಗಾಗಿ ಜಾಮೀನು ರಹಿತ ಅಪರಾಧ ಪ್ರಕರಣ ದಾಖಲಾಗಿದೆ.

ಪುನಲೂರು ಡಿಎಫ್‌ಒ ಶಹನವಾಜ್ ಅವರ ನಿರ್ದೇಶನದಂತೆ ಪಟ್ಟಣಪುರಂ ರೇಂಜ್ ಆಫೀಸರ್ ದಿಲೀಪ್ ಅವರ ಮೇಲ್ವಿಚಾರಣೆಯಲ್ಲಿ ಅಂಬಾನಾರ್ ಉಪ ರೇಂಜ್ ಆಫೀಸರ್ ಎಂ.ಅಜಯ್ ಕುಮಾರ್ ಅವರು ಪ್ರಕರಣ ದಾಖಲಿಸಿದ್ದಾರೆ.

ವಿಡಿಯೋವನ್ನು 8 ತಿಂಗಳ ಹಿಂದೆ ಸೆರೆಹಿಡಿಯಲಾಯಿತು. ದೃಶ್ಯಗಳನ್ನು ಸೆರೆಹಿಡಿಯುವಾಗ ಕೆರಳಿದ ಕಾಡಾನೆ ಯೂಟ್ಯೂಬರ್​ ಅಮಲಾ ಅನು ಅವರನ್ನು ಬೆನ್ನತ್ತಿ ಬಂದಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಅರಣ್ಯ ಇಲಾಖೆ ಪ್ರಕರಣವನ್ನು ದಾಖಲಿಸಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net