More

    VIDEO: ಚಪ್ಪಲಿ ಹಾಕಿಕೊಂಡು ದಿನವೂ ವಾಕಿಂಗ್​ಗೆ ಹೋಗೋ ಆನೆ! ಈ ಕುತೂಹಲ ನೋಡಲು ಭಕ್ತರ ದಂಡು…

    ಚೆನ್ನೈ: ಯಾವುದಾದರೂ ಕೆಲಸ ಅಸಾಧ್ಯ ಎನಿಸಿದಾಗ ಆನೆಗೆ ಚಡ್ಡಿ ಹಾಕುವ ಕೆಲಸ ಇದು ಎನ್ನುತ್ತಾರೆ. ಆದರೆ ಇಲ್ಲೊಂದು ಆನೆಗೆ ಚಪ್ಪಲಿ ಹಾಕಿದ್ದಾರೆ. ಈ ಚಪ್ಪಲಿ ನೋಡಲು ಜನಸಾಗರವೇ ಹರಿದು ಬಂದಿದ್ದು, ಆನೆ ಕೂಡ ಅಷ್ಟೇ ಖುಷಿಯಿಂದ ಚಪ್ಪಲಿ ಧರಿಸಿ ವಾಕಿಂಗ್​ಗೆ ಹೋಗುತ್ತದೆ.

    ಇಂಥದ್ದೊಂದು ವಿಶೇಷ ಆನೆ ಇರುವುದು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿರುವ ನೆಲ್ಲೈಯಪ್ಪರ್ ದೇವಸ್ಥಾನದಲ್ಲಿ. ಗಾಂಧಿಮತಿ ಎನ್ನುವ ಆನೆಗೆ ಚಪ್ಪಲಿ ಹೊಲಿದು ಕೊಡಲಾಗಿದೆ. ಈ ಚಪ್ಪಲಿಯ ಬೆಲೆ 12 ಸಾವಿರ ರೂಪಾಯಿ!

    ಇದು ಭಕ್ತರೆಲ್ಲಾ ಸೇರಿ ಆನೆಗೆ ನೀಡಿರುವ ಚಪ್ಪಲಿಯಂತೆ. ಸುಮಾರು 52 ವರ್ಷ ವಯಸ್ಸಿನ ಹೆಣ್ಣು ಆನೆ. ಇದನ್ನು ದೇವಾಲಯದ ಆವರಣದ ಬಳಿ ಐದು ಕಿಲೋಮೀಟರ್ ದೂರದವರೆಗೆ ನಿಯಮಿತವಾಗಿ ವಾಕ್ ಮಾಡಲು ಕರೆದುಕೊಂಡು ಹೋಗಲಾಗುತ್ತದೆ. ಇದೀಗ ಭಕ್ತರ ಆಕರ್ಷಣೆಯ ಕೇಂದ್ರ ಬಿಂದು. ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ದೇಗುಲದ ಸಂಘದ ಸಹಕಾರದಿಂದ ಈ ನಾಲ್ಕು ಚಪ್ಪಲಿ ನೀಡಲಾಗಿದೆ.

    ಇದು ತುಂಬಾ ವಯಸ್ಸಾಗಿರುವ ಆನೆ. ಆದ್ದರಿಂದ ಅದನ್ನು ವಾಕಿಂಗ್​ಗೆ ಕರೆದುಕೊಂಡು ಹೋಗುವಾಗ ಜಾಗರೂಕರಾಗಿರಬೇಕು, ಕಲ್ಲುಗಳು ಅಥವಾ ಚೂಪಾದ ವಸ್ತುಗಳ ಮೇಲೆ ಅವು ಹೆಜ್ಜೆ ಹಾಕುವಾಗ ಸಮಸ್ಯೆ ಆಗುತ್ತದೆ. ಆದ್ದರಿಂದ ಈ ಆನೆಗೆ ಚಪ್ಪಲಿ ನೀಡಲಾಗಿದೆ. ವೈದ್ಯರ ಸೂಚನೆಗೆ ಅನುಗುಣವಾಗಿ ಹೀಗೆ ಮಾಡಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.

    ಚಪ್ಪಲಿ ಧರಿಸುವಂತೆ ಆನೆಗೆ ತರಬೇತಿ ನೀಡಲಾಗಿದೆ. ಕಳೆದ ತಿಂಗಳು ಜೂನ್ 3 ರಂದು ನೆಲ್ಲೈಯಪ್ಪರ್ ದೇವಸ್ಥಾನದಲ್ಲಿ ವಾರ್ಷಿಕ ಆನೆ ಉತ್ಸವಕ್ಕೆ ಚಾಲನೆ ದೊರೆತಿದ್ದರಿಂದ ಸ್ವಾಮಿ ನೆಲ್ಲೈಯಪ್ಪರ್ ಮತ್ತು ಗಾಂಧೀಮತಿಯಮ್ಮನ್ ದೇವರಿಗೆ ವಿಶೇಷ ಪೂಜೆಗಳನ್ನು ಮಾಡಲಾಯಿತು.

    ವಿಡಿಯೋ ಇಲ್ಲಿದೆ ನೋಡಿ: ಕೃಪೆ ಫೆಡರಲ್​

    ಇಂಜಿನಿಯರ್​ ತಯಾರಿಸ್ತಿರೋ ಸಕತ್​ ಟೇಸ್ಟಿ ಚಾಕೊಲೇಟ್​ ಇವಂತೆ: ನೀವೂ ತಿಂದಿರಬಹುದು…ಹಾಗಿದ್ದರೆ…

    ಆಂಧ್ರದ ರಾಜಕೀಯದಲ್ಲಿ ಕುತೂಹಲದ ತಿರುವು: ಮಗನ ಬಿಟ್ಟು ಮಗಳ ಕೈಹಿಡಿದ ಮುಖ್ಯಮಂತ್ರಿ ಅಮ್ಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts