ಇಂಜಿನಿಯರ್​ ತಯಾರಿಸ್ತಿರೋ ಸಕತ್​ ಟೇಸ್ಟಿ ಚಾಕೊಲೇಟ್​ ಇವಂತೆ: ನೀವೂ ತಿಂದಿರಬಹುದು...ಹಾಗಿದ್ದರೆ...

chocolate1
Published on

ಕೇಪ್​ಟೌನ್​ (ದಕ್ಷಿಣ ಆಫ್ರಿಕಾ): ನೀವು ಚಾಕೊಲೇಟ್​ ಪ್ರಿಯರಾಗಿದ್ದರೆ ಖಂಡಿತ ಈ ವಿಷಯವನ್ನು ನೀವು ನಂಬಲಾರಿರಿ. ಅಷ್ಟಕ್ಕೂ ಚಾಕೊಲೇಟ್​ ಹೆಸರು ಕೇಳಿದ್ರೆ ಚಿಕ್ಕವರಿಗೆ ಮಾತ್ರವಲ್ಲ, ವಯಸ್ಸಾದವರಿಗೂ ಇಷ್ಟನೇ ಬಿಡಿ. ಹಾಗೆಂದು ಈ ವಿಷಯ ಓದಿದ ಮೇಲೆ ನಿಮಗೆ ಶಾಕ್​ ಆದ್ರೂ ಆಗಬಹುದು. ಏಕೆಂದರೆ ಈ ವಿಷಯವೇ ಹಾಗಿದೆ.

ದಕ್ಷಿಣ ಆಫ್ರಿಕಾದ ಕೇಪ್​ಟೌನ್​ ಇಂಜಿನಿಯರ್​ ಒಬ್ಬರು ಚಾಕೊಲೇಟ್​ ತಯಾರಿಸುತ್ತಿದ್ದಾರೆ. ಹಲವಾರು ವರ್ಷಗಳಿಂದಲೇ ಇದು ರೆಡಿಯಾಗುತ್ತಿದ್ದು, ಹಲವಾರು ದೇಶಗಳಲ್ಲಿ ಇದಕ್ಕೆ ಭಾರಿ ಡಿಮಾಂಡ್​ ಇದೆಯಂತೆ. ಇದಕ್ಕೆ ಕಾರಣ, ಇದರ ಟೇಸ್ಟ್​. ಅತಿ ರುಚಿಯಾಗಿರುವ ಹಾಗೂ ನೋಡಲು ಅಷ್ಟೇ ಸುಂದರ ಆಗಿರುವ ಈ ಚಾಕೊಲೇಟ್​ ಈಗ ಭಾರಿ ಸುದ್ದಿಯಾಗಿದೆ.

ಇದಕ್ಕೆ ಕಾರಣ, ಇದನ್ನು ತಯಾರಿಸುತ್ತಿರುವುದು ಕಂಬಳಿಹುಳುಗಳ ಮರಿಗಳಿಂದ ಎನ್ನುವ ಅಂಶ ತಿಳಿದುಬಂದಿದೆ! ಅನೇಕ ಜನರು ಈಗಾಗಲೇ ಈ ಚಾಕೊಲೇಟ್ ಅನ್ನು ಸೇವಿಸಿದ್ದು, ಈ ವಿಚಾರ ಮಾತ್ರ ಈಗ ಕಂಬಳಿಹುಳುವನ್ನು ಕಂಡರೆ ಮೈ ಝುಂ ಎನ್ನುವವರು ಮಾತ್ರವಲ್ಲದೇ ಬಹುತೇಕರಿಗೆ ಶಾಕಿಂಗ್​ ಮೂಡಿಸಿದೆ. ಕೆಮಿಕಲ್ ಇಂಜಿನಿಯರ್ ಈ ಹೊಸ ಚಾಕೊಲೇಟ್ ಕಂಡುಹಿಡಿದಿದ್ದಾರೆ.

ಈ ವಿಷಯ ಕೇಳಿದಾಕ್ಷಣ ವ್ಯಾಕ್​ ವ್ಯಾಕ್​ ಎಂದುಕೊಳ್ಳಲೂಬಹುದು. ಆದರೆ ಇದು ನಿಜ. ಕಂಬಳಿಹುಳಗಳ ಮರಿಗಳಿಂದ ಮೊದಲು ಹಿಟ್ಟು ತಯಾರಿಸಲಾಗುತ್ತಿದೆ. ಮತ್ತು ವಿವಿಧ ರೀತಿಯ ಚಾಕೊಲೇಟ್‌ ಮಾತ್ರವಲ್ಲದೇ ಕೆಲವು ವಿಧದ ಬಿಸ್ಕತ್ತುಗಳು, ಕೇಕ್‌ಗಳು ಮತ್ತು ಇನ್ನೂ ಅನೇಕ ತಿನಿಸು ಅದರಿಂದ ತಯಾರಿಸಲಾಗುತ್ತಿದೆ ಎನ್ನುವ ಅಂಶ ತಿಳಿದುಬಂದಿದೆ.

ಕಂಬಳಿಹುಳುವಿನ ದೇಹದಲ್ಲಿರುವ 'ಮೊಪೆನ್ ವರ್ಮ್' ಎಂಬ ಪ್ರೊಟೀನ್​ ಬಳಸಿಕೊಂಡು ಚಾಕೊಲೇಟ್ ತಯಾರಿಸಲಾಗುತ್ತಿದೆ ಎಂದು ಇದನ್ನು ಕಂಡುಹಿಡಿದಿರುವ ದಕ್ಷಿಣ ಆಫ್ರಿಕಾದ ಇಂಜಿನಿಯರ್ ವೆಲ್ಡಿ ವೆಸೇಲಾ ಹೇಳಿದ್ದಾರೆ.

ಇದಕ್ಕೆ ವಿದೇಶಗಳಿಂದ ಬಹಳ ಬೇಡಿಕೆ ಇದೆ. ಆರ್ಡರ್‌ಗಳು ಬರುತ್ತಿವೆ. ಈ ರೀತಿಯ ಕ್ಯಾಟರ್ಪಿಲ್ಲರ್ ಆಹಾರದ ಗುಣಮಟ್ಟವಾಗಿ ಅದರ ದೇಹದಲ್ಲಿ ಪ್ರೋಟೀನ್ ಮತ್ತು ಕಬ್ಬಿಣವನ್ನು ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ.

ಅಂದಹಾಗೆ ಈ ಇಂಜಿನಿಯರ್​ ಕಂಬಳಿಹುಳುಗಳ ಕೃಷಿ ಮಾಡುತ್ತಿದ್ದಾರಂತೆ.ತಾವೇ ಬೆಳೆಸುವ ಈ ವಿಶಿಷ್ಟ ಬಗೆಯ ಹುಳುಗಳ ಮರಿಯಿಂದ ಇವುಗಳನ್ನು ತಯಾರಿಸುತ್ತಿದ್ದಾರಂತೆ. ಈ ಚಾಕೊಲೇಟ್ ಎಲ್ಲಾ ಕಾಲದಲ್ಲೂ ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net