

ನವದೆಹಲಿ: ಭಾರತದಲ್ಲಿ ಪ್ರಸ್ತುತ ಮದುವೆ ಸೀಸನ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರತಿದಿನ ನೂರಾರು ಮದುವೆಗಳು ನಡೆಯುತ್ತಿರುತ್ತವೆ. ವಿವಾಹಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಶೇರ್ ಮಾಡಲಾಗುತ್ತಿದೆ. ಅವುಗಳಲ್ಲಿ ಕೆಲವೊಂದಿಷ್ಟು ವಿಡಿಯೋ ವಿಶೇಷ ಕಾರಣಗಳಿಂದಾಗಿ ವೈರಲ್ ಆಗಿಬಿಡುತ್ತವೆ. ಅದೇ ರೀತಿ ವೈರಲ್ ಆಗಿರುವ ಈ ಒಂದು ವಿಡಿಯೋ ನೋಡಿದರೆ ನಿಮ್ಮ ಹುಬ್ಬೇರುವುದು ಖಂಡಿತ.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿರುವ ವರನಿಗೆ ವಯಸ್ಸು 60 ವರ್ಷ ದಾಟಿರುವಂತೆ ಕಾಣುತ್ತದೆ. ಆದರೆ, 25 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವಂತೆ ವಧು ಕಾಣಿಸುವುದಿಲ್ಲ. ಇಬ್ಬರ ನಡುವೆ ಭಾರೀ ವಯಸ್ಸಿನ ಅಂತರವಿದೆ. ಮದುವೆ ಗಂಡಿನ ವೇಷದಲ್ಲಿ ಹಿರಿಯ ವ್ಯಕ್ತಿ ಕುಳಿತಿದ್ದರೆ, ಅವರ ಪಕ್ಕದಲ್ಲಿ ಯುವತಿ ನಗುತ್ತಾ ಕುಳಿತಿರುವುದು ವಿಡಿಯೋದಲ್ಲಿದೆ.
ವೀಡಿಯೋ ನೋಡಿದರೆ ಹಾರ ಬದಲಾಯಿಸುವ ಕಾರ್ಯಕ್ರಮ ಮುಗಿದಿದೆ ಎಂದು ಗೊತ್ತಾಗುತ್ತದೆ. ಇದಾದ ನಂತರ ವಧು-ವರರಿಬ್ಬರೂ ವೇದಿಕೆಯ ಮೇಲೆ ಕುಳಿತಿರುವುದು ಕಂಡುಬರುತ್ತದೆ. ವಧು-ವರರ ವಯಸ್ಸಿನಲ್ಲಿ 35 ವರ್ಷಕ್ಕೂ ಹೆಚ್ಚು ಅಂತರವಿರುವುದನ್ನು ನೀವು ನೋಡಬಹುದು. ವರನನ್ನು ಎಲ್ಲರು ಬಾಬ್ಜಿ ಎಂದು ಕರೆರೆಯುವುದನ್ನು ಕೇಳಬಹುದು. ವರನ ಗಡ್ಡ ಸಂಪೂರ್ಣ ಬಿಳಿಯಾಗಿದೆ.
ಇನ್ನು ವಿಡಿಯೋದ ಹಾಸ್ಯಮಯ ಕ್ಷಣ ಯಾವುದೆಂದರೆ, ಕ್ಯಾಮೆರಾಮೆನ್ ವಧುವಿನ ಕಡೆ ತನ್ನ ಕ್ಯಾಮೆರಾ ಕಣ್ಣನ್ನು ತಿರುಗಿಸಿದಾಗ ವಧು ತುಂಬಾ ನಾಚಿಕೊಳ್ಳುತ್ತಾಳೆ. ಇದಲ್ಲದೆ, ಕ್ಯಾಮೆರಾಗೆ ತನ್ನ ಮುಖವನ್ನು ತೋರಿಸಲು ಹಿಂಜರಿದು ಮುಖವನ್ನು ಸೆರಗಿನಿಂದ ಮುಚ್ಚಿಕೊಳ್ಳುತ್ತಾಳೆ. ಇದೇ ದೃಶ್ಯ ವಿಡಿಯೋದ ಕೇಂದ್ರ ಬಿಂದುವಾಗಿದ್ದು, ಎಲ್ಲರೂ ವಿಡಿಯೋವನ್ನು ಟ್ರೋಲ್ ಮಾಡುತ್ತಿದ್ದಾರೆ.
ಬಹುಶಃ ಯುವತಿ ಬಡವಳಾಗಿರಬಹುದು, ಅದಕ್ಕೆ ವಯಸ್ಸಾದ ವ್ಯಕ್ತಿಯನ್ನು ಮದುವೆಯಾಗುತ್ತಿದ್ದಾಳೆ ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಬಹುಶಃ ಇಂದು ತಮಾಷೆಗಾಗಿ ಮಾಡಿದ ವಿಡಿಯೋ ಇರಬಹುದು ಎಂದಿದ್ದಾರೆ. ಆದರೆ, ಈ ವಿಡಿಯೋವನ್ನು ಎಲ್ಲಿ ಸೆರೆಹಿಡಿಯಲಾಗಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದರೆ, ಭುತ್ನಿ ಕೆ ಮೀಮ್ಸ್ (bhutni_ke_memes) ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಅಪ್ಲೋಡ್ ಆಗಿದ್ದು, ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ. (ಏಜೆನ್ಸೀಸ್)