ಇಡಿ ದಾಳಿ ವೇಳೆ ಜಾರ್ಖಂಡ್​ ಸಿಎಂ ಹೇಮಂತ್​ ಸೊರೆನ್ ನಿಕಟವರ್ತಿಯ ಮನೆಯಲ್ಲಿ ಎರಡು ಎಕೆ-47 ರೈಫಲ್ಸ್​ ಪತ್ತೆ!

Two rifeles
Published on

ರಾಂಚಿ: ಜಾರ್ಖಂಡ್​ ಮುಖ್ಯಮಂತ್ರಿ ಹೇಮಂತ್​ ಸೊರೆನ್ ಅವರ ನಿಕಟವರ್ತಿಯ ಮನೆಯ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಎರಡು ಎಕೆ-47 ರೈಫಲ್ಸ್​ ಪತ್ತೆಯಾಗಿರುವುದಾಗಿ ಬುಧವಾರ ವರದಿಯಾಗಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದ ಅಕ್ರಮ ಹಣ ವರ್ಗಾವಣೆ ಸಂಬಂಧ ಪ್ರಸ್ತುತ ನಡೆಯುತ್ತಿರುವ ತನಿಖೆ ಸಂಬಂಧ ಜಾರ್ಖಂಡ್​ನ ಅನೇಕ ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದೆ. ಜಾರ್ಖಂಡ್​ ಸಿಎಂ ನಿಕಟವರ್ತಿ ಪ್ರೇಮ್​ ಪ್ರಕಾಶ್​ ಎಂಬುವರಿಗೆ ಸೇರಿದ ಮನೆಯ ಮೇಲೆ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸಿದಾಗ, ಬೀರುವಿನಲ್ಲಿ ಎಕೆ-47 ರೈಫಲ್ಸ್​ ಪತ್ತೆಯಾಗಿವೆ.

2022ರ ಮೇ ತಿಂಗಳಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ರಿಯಲ್ ಎಸ್ಟೇಟ್ ಉದ್ಯಮಿ ಪ್ರೇಮ್ ಪ್ರಕಾಶ್ ಅವರನ್ನು ಪ್ರಶ್ನಿಸಿತ್ತು. ಮೂಲಗಳ ಪ್ರಕಾರ ಪ್ರಕಾಶ್​ ಬಿಹಾರದ ಸಾಸರಾಮ್​ ಮೂಲದವರು. ಜಾರ್ಖಂಡ್​ ಸರ್ಕಾರದಲ್ಲಿ ಪ್ರಕಾಶ್​ಗೆ ತುಂಬಾ ವರ್ಚಸ್ಸು ಇದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳ ಜೊತೆ ಪ್ರಕಾಶ್​ಗೆ ಆಪ್ತ ಸಂಬಂಧವಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net