ನನ್ನ ಗಂಡನನ್ನು ಬಂಧಿಸಬೇಡಿ! ಶೀಲ ಶಂಕಿಸಿ ಗುಪ್ತಾಂಗವನ್ನೇ ಹೊಲಿದ್ರೂ ಪಾಪಿ ಪತಿಯನ್ನು ಬಿಟ್ಟುಕೊಡದ ಪತ್ನಿ

Sew
Published on

ಸಿಂಗ್ರೌಲಿ (ಮಧ್ಯಪ್ರದೇಶ): ಪತ್ನಿಯ ಶೀಲ ಶಂಕಿಸಿ ಪಾಪಿ ಪತಿಯೊಬ್ಬ ಆಕೆಯ ಜನನಾಂಗವನ್ನು ಸೂಜಿಯಿಂದ ಹೊಲಿದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ರೈಲಾ ಗ್ರಾಮದಲ್ಲಿ ನಡೆದಿದೆ.

ಗಂಡನ ಕೃತ್ಯದ ಬಗ್ಗೆ ಪತ್ನಿ ಮಾಹಿತಿ ನೀಡಿದ ಬೆನ್ನಲ್ಲೇ ಆತನ ವಿರುದ್ಧ ದೂರು ದಾಖಲಾಗಿದೆ ಎಂದು ಸಿಂಗ್ರೌಲಿಯ ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿ ಅನಿಲ್​ ಸೋಂಕರ್​ ತಿಳಿಸಿದ್ದಾರೆ. ಸದ್ಯ ಆರೋಪಿ ಪತಿ ಪರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕ್ರೂರಿ ಗಂಡ ಕ್ಷಮಿಸಲಾರದ ತಪ್ಪನ್ನು ಎಸಗಿದ್ದರೂ ಸಹ ಆತನೆಡೆಗೆ ಕರುಣೆ ತೋರಿರುವ ಪತ್ನಿ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಬೇಡಿ, ಆತನನ್ನು ಬಂಧಿಸಬೇಡಿ ಎಂದು ಪೊಲೀಸರು ಸಂತ್ರಸ್ತೆ ಕೇಳಿಕೊಂಡಿದ್ದಾಳೆ. ಅಲ್ಲದೆ, ಗಂಡನಿಗೆ ಬುದ್ಧಿವಾದ ಹೇಳಿ. ಆತನಿಗೆ ಒಂದೆರೆಡು ಮಾತು ಬೈಯಿರಿ, ಮುಂದೆ ಇಂತಹ ಕೃತ್ಯ ಎಸಗದಂತೆ ತಿಳಿ ಹೇಳಿರಿ ಎಂದು ಮನವಿ ಮಾಡಿಕೊಂಡಿದ್ದಾಳೆ.

ಸದ್ಯ ಸಂತ್ರಸ್ತೆ ಸಿಂಗ್ರೌಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಆಕೆಯ ಆರೋಗ್ಯ ಸ್ಥಿರವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net