

ಚಂಡಿಗಢ: ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಭರ್ಜರಿ ಮುನ್ನಡೆ ಸಾಧಿಸಿರುವುದರಿಂದ ಆಪ್ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಮನೆಯಲ್ಲಿ ಜಿಲೇಬಿ ತಯಾರಿ ಜತೆಗೆ ಸಂಭ್ರಮಾಚರಣೆಗೆ ಜೋರಾಗಿ ಸಿದ್ಧತೆ ನಡೆಯುತ್ತಿದೆ.
ಪಂಜಾಬ್ನ ಸಂಗ್ರೂರ್ನಲ್ಲಿರುವ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಸಂಪೂರ್ಣ ನಿವಾಸ ಹೂಗಳಿಂದ ಅಲಂಕಾರಗೊಂಡಿದೆ.
ಸದ್ಯದ ಟ್ರೆಂಡ್ ಪ್ರಕಾರ ಪಂಜಾಬ್ನಲ್ಲಿ ಆಪ್ 47 ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದರೆ, ಕಾಂಗ್ರೆಸ್ 31 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಎರಡನೇ ಸ್ಥಾನದಲ್ಲಿದೆ. ಬಿಜೆಪಿ 5 ಸ್ಥಾನಗಳನ್ನು ಗಳಿಸಿದೆ.
ಪಂಜಾಬ್ ಒಟ್ಟು 117 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಅಧಿಕಾರದ ಗದ್ದುಗೆ ಏರಲು 59 ಮ್ಯಾಜಿಕ್ ನಂಬರ್ ಅವಶ್ಯಕತೆ ಇದೆ. ಆಮ್ ಆದ್ಮಿ ಪಕ್ಷ ಭಾರೀ ಅಂತರದಲ್ಲಿ ಮುಂದಿದ್ದು, ಈ ಬಾರಿ ಪಂಜಾಬ್ ಅಧಿಕಾರದ ಗದ್ದುಗೆ ಏರುವ ಲಕ್ಷಣಗಳು ಕಾಣುತ್ತಿದೆ. (ಏಜೆನ್ಸೀಸ್)
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..