ಆಗಸ್ಟ್​ನಲ್ಲಿ ಮಹಾಮಾರಿ ಕರೊನಾ ಮುಕ್ತವಾಗಲಿದೆ ಬ್ರಿಟನ್​: ಸರ್ಕಾರದ ವರದಿಯಲ್ಲೇನಿದೆ?

Corona Vaccine
Published on

ಲಂಡನ್​: ಬ್ರಿಟನ್​ ಪಾಲಿಗೆ ಆಶಾದಾಯಕ ವರದಿಯೊಂದು ಬಂದಿದ್ದು, ಆಗಸ್ಟ್​ ವೇಳೆಗೆ ಬ್ರಿಟನ್ ಸಂಪೂರ್ಣ ಕರೊನಾ ವೈರಸ್​ ಮುಕ್ತವಾಗಲಿದೆ ಎಂದು ಸರ್ಕಾರದ ನಿರ್ಗಮಿತ ಲಸಿಕೆ ಕಾರ್ಯಪಡೆಯ ಮುಖ್ಯಸ್ಥ ಕ್ಲೈವ್​ ಡಿಕ್ಸ್​ ಟೆಲಿಗ್ರಾಫ್​ ಮಾಧ್ಯಮಕ್ಕೆ ಶುಕ್ರವಾರ ಮಾಹಿತಿ ನೀಡಿದ್ದಾರೆ.

ಆಗಸ್ಟ್​ ವೇಳೆ ಯುನೈಟೆಡ್​ ಕಿಂಗ್​ಡಮ್​ನಲ್ಲಿ ಯಾವುದೇ ಪರಿಚಲನೆಯ ವೈರಸ್ ಇರುವುದಿಲ್ಲ. ಲಸಿಕೆ ಉತ್ತೇಜನ ಕಾರ್ಯಕ್ರಮವನ್ನು 2022ರ ಆರಂಭಕ್ಕೂ ಮುನ್ನವೇ ಹಿಂಪಡೆಯಬಹುದು ಎಂದು ಡಿಕ್ಸ್​ ಹೇಳಿದ್ದಾರೆ.

ಇನ್ನು ಈ ವರ್ಷದ ಕೊನೆಯಲ್ಲಿ ಯಾವ ಕೋವಿಡ್ ಲಸಿಕೆಗಳು ದುರ್ಬಲ ಜನರಿಗೆ ಅತ್ಯುತ್ತಮ ಉತ್ತೇಜನ ನೀಡುತ್ತವೆ ಎಂದು ಸರ್ಕಾರ ನೋಡುತ್ತಿದೆ. ಜುಲೈ ಅಂತ್ಯದ ವೇಳೆ ಯುಕೆಯಲ್ಲಿ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳುವ ನಿರೀಕ್ಷೆ ಇದೆ. ಆ ಹೊತ್ತಿಗೆ ನಾವು ತಿಳಿದಿರುವ ಎಲ್ಲಾ ರೂಪಾಂತರ ವೈರಸ್​ಗಳಿಂದ ನಮ್ಮ ಜನರನ್ನು ರಕ್ಷಿಸಿದಂತಾಗುತ್ತದೆ ಎಂದು ಡಿಕ್ಸ್​ ಅಭಿಪ್ರಾಯ ಪಟ್ಟರು.

ಬ್ರಿಟನ್​ 51 ದಶಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ಈಗಾಗಲೇ ನೀಡಿದೆ ಮತ್ತು ಕನಿಷ್ಠ ಅರ್ಧದಷ್ಟು ವಯಸ್ಕ ಜನಸಂಖ್ಯೆಗೆ ಮೊದಲ ಡೋಸ್ ನೀಡಿದ ಎರಡನೇ ತ್ವರಿತ ದೇಶವಾಗಿದೆ. ರಕ್ತ ಹೆಪ್ಪುಗಟ್ಟುವಿಕೆಯ ಸಣ್ಣ ಅಪಾಯದಿಂದಾಗಿ 40 ವರ್ಷದೊಳಗಿನ ಜನರಿಗೆ ಆಕ್ಸ್‌ಫರ್ಡ್/ ಅಸ್ಟ್ರಾಜೆನೆಕಾ (ಎಝಡ್‌ಎನ್‌.ಎಲ್) ಕೋವಿಡ್ -19 ಲಸಿಕೆಗೆ ಪರ್ಯಾಯವಾಗಿ ಬೇರೆ ಲಸಿಕೆ ನೀಡಬೇಕೆಂದು ಬ್ರಿಟಿಷ್ ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್‌ನಲ್ಲಿ ಕಾರ್ಯಪಡೆಯ ಹಂಗಾಮಿ ನಾಯಕರಾಗಿ ನೇಮಕಗೊಂಡ ಕ್ಲೈವ್ ಡಿಕ್ಸ್ ಕಳೆದ ವಾರ ತಮ್ಮ ಸ್ಥಾನದಿಂದ ಕೆಳಗಿಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net