VIDEO| ಬಾಲಿವುಡ್​ನ ಬಹುನಿರೀಕ್ಷಿತ ಬ್ರಹ್ಮಾಸ್ತ್ರ ಚಿತ್ರದ ಟ್ರೈಲರ್ ರಿಲೀಸ್

Bramhasthra
Published on

ಮುಂಬೈ: ಬಾಲಿವುಡ್​ನ ಕ್ಯೂಟ್​ ಕಪಲ್ ನಟ ರಣಬೀರ್​ ಕಪೂರ್ ಹಾಗೂ ಆಲಿಯಾ ಭಟ್ ​ಅಭಿನಯದ ಬಹುನಿರೀಕ್ಷಿತ ಬ್ರಹ್ಮಾಸ್ತ್ರ ಚಿತ್ರದ ಟ್ರೈಲರ್ ರಿಲೀಸ್ ಇಂದು ಬಿಡುಗಡೆಯಾಗಿದೆ.

ಈ ಸಿನಿಮಾ ಅತಿದೊಡ್ಡ ಸಿನಿಮ್ಯಾಟಿಕ್​ ಅನುಭವ ನೀಡುವುದರಲ್ಲಿ ಸಂಶಯವೇ ಇಲ್ಲ ಎಂಬುದನ್ನು ಟ್ರೈಲರ್​ ಸುಳಿವು ನೀಡಿದೆ. ಇದೀಗ ಕೂ ನಲ್ಲಿ ಸಿನಿಮಾದ ಟ್ರೈಲರ್ ಟ್ರೇಡಿಂಗ್​ನಲ್ಲಿದ್ದು, ವಿಭಿನ್ನ ಶೈಲಿಯಲ್ಲಿ ಚಿತ್ರ ಮೂಡಿಬಂದಿರುವುದು ಎಲ್ಲರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇದೇ ಮೊದಲ ಬಾರಿಗೆ ಗಂಡ -ಹೆಂಡತಿ ಇಬರೂ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಬಾಲಿವುಡ್​ನ ‘ಬ್ರಹ್ಮಾಸ್ತ್ರ’ ಸಿನಿಮಾ ಕನ್ನಡದಲ್ಲೂ ತೆರೆಕಾಣಲಿದೆ. ಮುಖ್ಯಭೂಮಿಕೆಯಲ್ಲಿ ಆಲಿಯಾಗೆ ರಣಬೀರ್ ಕಪೂರ್ ಜೋಡಿಯಾದರೆ, ಇನ್ನುಳಿದಂತೆ ಅಮಿತಾಭ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್, ಡಿಂಪಲ್ ಕಪಾಡಿಯಾ ಹಲವರು ಸಿನಿಮಾದಲ್ಲಿದ್ದಾರೆ.

ಮೂರು ಭಾಗಗಳಲ್ಲಿ ಸಿದ್ಧವಾಗಿರುವ ‘ಬ್ರಹ್ಮಾಸ್ತ್ರ’ ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಮೂರರ ಪೈಕಿ ಮೊದಲ ಭಾಗ ಸೆಪ್ಟೆಂಬರ್ 9ರಂದು ಬರಲಿದೆ. (ಏಜೆನ್ಸೀಸ್)

Koo App
THE WAIT IS OVER... ’BRAHMASTRA’ TRAILER OUT NOW... #BrahmāstraTrailer... #Brahmāstra in *cinemas* 9 Sept 2022 in #Hindi, #Tamil, #Telugu, #Malayalam and #Kannada.
View attached media content
-Taran Adarsh (@taran_adarsh)15 June 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net