ಮೊದಲ ದಿನವೇ ಬಿಗ್​​ಬಾಸ್​ ಮನೆಯೊಳಗೆ ಕಣ್ಣೀರಧಾರೆ: ಮನದ ನೋವನ್ನು ಬಿಚ್ಚಿಟ್ಟ ಸ್ಪರ್ಧಿಗಳು

BBK 9
Published on

ಬೆಂಗಳೂರು: ‘ಬಿಗ್​ ಬಾಸ್​ ಒಟಿಟಿ ಕನ್ನಡ’ದ ಮೊದಲ ಸೀಸನ್​ಗೆ ಶನಿವಾರ ರಾತ್ರಿ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಮೊದಲ ದಿನದ ವರ್ಣರಂಜಿತ ಕಾರ್ಯಕ್ರಮದಲ್ಲಿ ಈ ಸೀಸನ್​ನಲ್ಲಿ ಭಾಗವಹಿಸುತ್ತಿರುವ ಎಲ್ಲ 16 ಸ್ಪರ್ಧಿಗಳನ್ನು ನಿರೂಪಕ ಸುದೀಪ್, ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಇಂದಿನಿಂದ ಬಿಗ್​ ಬಾಸ್​ ಒಟಿಟಿ ಕನ್ನಡದ ಅಸಲಿ ಆಟ ಆರಂಭವಾಗಲಿದೆ.

ಕಾರ್ಯಕ್ರಮದ ಮೊದಲ ದಿನದ ಪ್ರೊಮೋವನ್ನು ವಯಕಾಮ್​ 18 ಕನ್ನಡ ಕ್ಲಸ್ಟರ್​ ಹೆಡ್​ ಆದ ಪರಮೇಶ್ವರ್​ ಗುಂಡ್ಕಲ್ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಮೊದಲ ದಿನವೇ ಬಿಗ್​ಬಾಸ್​ ಮನೆಯೊಳಗೆ ಸ್ಪರ್ಧಿಗಳು ಕಣ್ಣೀರು ಸುರಿಸಿದ್ದಾರೆ. ತಮ್ಮ ಜೀವನದ ಕಹಿ ಘಟನೆಗಳನ್ನು ತೆರೆದಿಡುತ್ತಾ ಸ್ಪರ್ಧಿಗಳು ವೇದಿಕೆ ಮೇಲೆಯೇ ದುಃಖಿಸಿದ್ದಾರೆ.

ಇತ್ತೀಚೆಗೆ ಕೌಟುಂಬಿಕ ಕಲಹದಿಂದ ಸುದ್ದಿಯಾಗಿದ್ದ ನಟಿ ಚೈತ್ರಾ ಹಳ್ಳಿಕೇರಿ ಅವರು ತಮ್ಮ ಗಂಡನಿಂದ ಕಿರುಕುಳ ಅನುಭವಿಸಿದ್ದನ್ನು ಬಿಚ್ಚಿಟ್ಟಿದ್ದಾರೆ. ಮದುವೆಯಾದ ಮೂರೇ ತಿಂಗಳಿಗೆ ಕೌಟುಂಬಿಕ ಹಿಂಸೆ ಶುರುವಾಯಿತು. ಶೂ ಕಾಲಲ್ಲಿ ಒದಗಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಪತ್ರಕರ್ತ ಸೋಮಣ್ಣ ಮಾಚಿಮಾಡ ಜೀವನದಲ್ಲಿ ಮರೆತು ಬದುಕಲು ಆಗುತ್ತಿಲ್ಲ. ಆಕೆಯೇ ಮೊದಲು ಮತ್ತು ಆಕೆಯೇ ಕೊನೆ ಎಂದಿದ್ದಾರೆ.

ಸದ್ಯ ಪ್ರೊಮೋ ವೈರಲ್​ ಆಗಿದ್ದು, ಎಲ್ಲ ಸ್ಪರ್ಧಿಗಳು ಏನೇನು ಹೇಳಿದ್ದಾರೆ ಎಂದು ತಿಳಿಯಬೇಕಾದರೆ ನೀವು ವೂಟ್​ ಸೆಲೆಕ್ಟ್​ ಸದಸ್ಯತವವನ್ನು ಪಡೆಯಬೇಕಿದೆ. ಏಕೆಂದರೆ, ಇದು ಬಿಗ್​ಬಾಸ್​ ಒಟಿಟಿ ಕಾರ್ಯಕ್ರಮ ಆಗಿರುವುದರಿಂದ ಟಿವಿಯಲ್ಲಿ ಇದು ಪ್ರಸಾರವಾಗುವುದಿಲ್ಲ.

ಸ್ಪರ್ಧಿಗಳ ಪಟ್ಟಿ ಈ ಕೆಳಕಂಡಂತಿದೆ

ನಟರಾದ ರಾಕೇಶ್ ಅಡಿಗ, ಚೈತ್ರಾ ಹಳ್ಳಿಕೇರಿ, ಸಾನಿಯಾ ಅಯ್ಯರ್, ರೂಪೇಶ್ ಶಟ್ಟಿ, ಅರ್ಜುನ್ ರಮೇಶ್, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್, ಪತ್ರಕರ್ತ ಸೋಮಣ್ಣ ಮಾಚಿಮಾಡ, ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ ಸೋನು ಶ್ರೀನಿವಾಸ ಗೌಡ, ಸ್ಪೂರ್ತಿ ಗೌಡ, ಕಿರಣ್ ಯೋಗೇಶ್ವರ್, ಲೋಕೇಶ್, ಉದಯ್ ಸೂರ್ಯ, ಅಕ್ಷತಾ ಕುಕ್ಕಿ, ಜಶ್ವಂತ್-ನಂದು ಮತ್ತು ಜಯಶ್ರೀ ಆರಾಧ್ಯ ಸ್ಪರ್ಧಿಗಳಾಗಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net