ಬೆಂಗಳೂರು ವಿದ್ಯಾರ್ಥಿನಿ ಗೋಪಿಕಾ ಸುರೇಶ್​ಗೆ ಒಲಿದ 2021ನೇ ಸಾಲಿನ ಮಿಸ್​ ಕೇರಳ ಕಿರೀಟ!

Gopika
Published on

ಕೊಚ್ಚಿ: ಬೆಂಗಳೂರು ವಿದ್ಯಾರ್ಥಿನಿ ಗೋಪಿಕಾ ಸುರೇಶ್​ ಅವರು 2021ನೇ ಸಾಲಿನ ಮಿಸ್​ ಕೇರಳ ಕಿರೀಟಕ್ಕ ಭಾಜನರಾಗಿದ್ದಾರೆ. ಗುರುವಾರ ಸಂಜೆ ಕೊಚ್ಚಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಗೆಲುವು ದಾಖಲಿಸುವ ಮೂಲಕ ಮಿಸ್​ ಕೇರಳ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಸ್ಪರ್ಧೆಯಲ್ಲಿ ಗೋಪಿಕಾ ಮೊದಲ ಸ್ಥಾನ ಪಡೆದರೆ, ಎರ್ನಾಕುಲಂ ನಿವಾಸಿ ಲಿವ್ಯಾ ಮತ್ತು ತ್ರಿಸ್ಸೂರ್​ ಮೂಲದ ಗಗನಾ ಗೋಪಾಲ್​ ಅವರು ಕ್ರಮವಾಗಿ ಮೊದಲು ಮತ್ತು ಎರಡನೇ ರನ್ನರ್​ ಅಪ್​ ಸ್ಥಾನ ಪಡೆದುಕೊಂಡರು.

ಒಟ್ಟು 25 ಸ್ಪರ್ಧಿಗಳನ್ನು ಹಿಂದಿಕ್ಕಿ ಗೋಪಿಕಾ ಮಿಸ್​ ಕೇರಳ ಪಟ್ಟಕ್ಕೇರಿದ್ದಾರೆ. ಕೇರಳದ ಕಣ್ಣೂರು ಮೂಲದ ಗೋಪಿಕಾ ಸುರೇಶ್​, ಬೆಂಗಳೂರಿನ ಶಿಕ್ಷಣ ಪಡೆಯುತ್ತಿದ್ದಾರೆ. ಎರಡನೇ ರನ್ನರ್​ ಅಪ್​ ಗಗನಾ ಕೂಡ ವಿದ್ಯಾರ್ಥಿನಿಯಾಗಿದ್ದು, ಆಸ್ಟ್ರೇಲಿಯಾ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಸ್ಪರ್ಧೆ ತೀರ್ಪುಗಾರರ ವಿಭಾಗದಲ್ಲಿ ಚಲನಚಿತ್ರ ನಿರ್ಮಾಪಕ ಜಿತು ಜೋಸೆಫ್ ಮತ್ತು ಸಂಗೀತ ಸಂಯೋಜಕ ದೀಪಕ್ ದೇವ್ ಇದ್ದರು. ಕಳೆದ ಬಾರಿ ಎರ್ನಾಕುಲಂನ ಎಂಬಿಬಿಎಸ್​ ವಿದ್ಯಾರ್ಥಿನಿ ಎರಿನ್​ ಲಿಜ್​ ಜಾನ್​ ಮಿಸ್​ ಕೇರಳ 2020 ಪಟ್ಟವನ್ನು ಗಿಟ್ಟಿಸಿಕೊಂಡಿದ್ದರು. ಅಮೆರಿಕ ನಿವಾಸಿ ಅಥಿರಾ ರಾಜೀವ್​ ಮತ್ತು ಕಣ್ಣೂರ್​ ಮೂಲದ ಅಶ್ವಥಿ ನಂಬಿಯಾರ್​ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್​ ಅಪ್​ ಆಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net