ಜೆಡಬ್ಲ್ಯು ಮ್ಯಾರಿಯೇಟ್​ ವಿರುದ್ಧ ಎಫ್​ಐಆರ್​: SIIMA ಪ್ರಶಸ್ತಿ ಕಾರ್ಯಕ್ರಮಕ್ಕೆ ಬಂದಿದ್ದ ಕಲಾವಿದರ ಮೇಲೊಂದು ಕಣ್ಣು

J W Marriate
Published on

ಬೆಂಗಳೂರು: ಸೈಮಾ ಪ್ರಶಸ್ತಿ ಕಾರ್ಯಕ್ರಮಕ್ಕೆ ಬಂದಿದ್ದ ಕಲಾವಿದರು ಉಳಿದುಕೊಂಡಿದ್ದ ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯು ಮ್ಯಾರಿಯೇಟ್​ ಹೋಟೆಲ್​ ಮೇಲೆ ಕಬ್ಬನ್​ ಪಾರ್ಕ್​ ಠಾಣಾ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

ಅವಧಿ ಮೀರಿ ಪಾರ್ಟಿ ಮಾಡಿದ ಆರೋಪದ ಮೇಲೆ ಹೋಟೆಲ್​ನ ಮ್ಯಾನೇಜರ್​ ಹಾಗೂ ಪಾರ್ಟಿ ಆರ್ಗನೈಸರ್​ ವಿರುದ್ಧ ಎಫ್​ಐರ್​ ದಾಖಲಿಸಲಾಗಿದೆ. ಕಳೆದ 12ರಂದು ರಾತ್ರಿ 3 ಗಂಟೆವರೆಗೆ ಪಾರ್ಟಿ ನಡೆಸಿರುವ ಆರೋಪ ಕೇಳಿಬಂದಿದೆ. ಕಾನೂನಿನ ಪ್ರಕಾರ ಒಂದು ಗಂಟೆಗೆ ಪಾರ್ಟಿ ಮುಗಿಯಬೇಕಿತ್ತು. ಆದರೆ, ಕಾನೂನು ನಿಯಮಗಳನ್ನು ಗಾಳಿಗೆ ತೂರಿ ನಸುಕಿನ ಜಾವ 3.30ರವರೆಗೂ ಪಾರ್ಟಿ ನಡೆಸಿರುವ ಆರೋಪ ಕೇಳಿಬಂದಿದೆ. 1 ಗಂಟೆಗೆ ಮುಗಿಸಬೇಕೆಂದು ಸೂಚನೆ ನೀಡಿದ್ದರೂ ಸಹ ಅದಕ್ಕೆ ಕ್ಯಾರೆ ಎನ್ನದೆ ಪಾರ್ಟಿ ನಡೆಸಿರುವ ಆರೋಪವಿದೆ.

ನಗರದಲ್ಲಿ ನಡೆದಿದ್ದ ಸೈಮಾ ಅವಾರ್ಡ್​ ಕಾರ್ಯಕ್ರಮಕ್ಕೆ ಬಂದಿದ್ದ ಸ್ಟಾರ್​ಗಳು ಈ ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಹೋಟೆಲ್​ನಲ್ಲಿ ಉಳಿದುಕೊಂಡಿದ್ದ ಸ್ಟಾರ್​ಗಳು ಪಾರ್ಟಿಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಎರಡು ಬಾರಿ ಅವಧಿ ಮೀರಿ ಪಾರ್ಟಿ ಮಾಡಿದ್ದ ಆರೋಪ ಹೋಟೆಲ್​ ಸಿಬ್ಬಂದಿ ಮೇಲಿದೆ. 2 ಬಾರಿಯು ಎಚ್ಚರಿಕೆ ನೀಡಿ ಪೊಲೀಸರು ಬಿಟ್ಟು ಕಳುಹಿಸಿದ್ದರು. ಆದರೆ, ಈಗ ಮತ್ತೊಮ್ಮೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

ಸದ್ಯ ಪ್ರಕರಣ ದಾಖಲಾಗಿದ್ದು, ಪಾರ್ಟಿಯಲ್ಲಿ ಏನಾದರೂ ಅಕ್ರಮ ಚಟುವಟಿಕೆ ನಡೆದಿದೆಯಾ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಳೆಹಾಕುತ್ತಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net