ಹೊರಗಿನಿಂದ ನೋಡಲು ಬ್ಯೂಟಿ ಪಾರ್ಲರ್: ಒಳಗೆ ಎಂಟ್ರಿ ಕೊಟ್ಟರೆ ಬೇರೆಯದ್ದೇ ಸ್ಟೋರಿ..!​

Parlour
Published on

ವಿಜಯವಾಡ: ಬ್ಯೂಟಿ ಪಾರ್ಲರ್​ ಸೋಗಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಗ್ಯಾಂಗ್​ ಅನ್ನು ಪೂರ್ವ ಗೋದಾವರಿಯ ಕಾಕಿನಾಡ ಪೊಲೀಸರು ಬಂಧಿಸಿದ್ದಾರೆ.

ಎರಡು ತಿಂಗಳಿಂದ ಸರ್ವಪಾವರಂ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಬರುವ ಸಿದ್ಧಾರ್ಥ ನಗರ ಕೇಂದ್ರದಲ್ಲಿ ಬಾಡಿಗೆ ಮನೆಯಲ್ಲಿ ಸುಧಾರಾಣಿ ಎಂಬಾಕೆಯನ್ನು ಬ್ಯೂಟಿ ಪಾರ್ಲರ್​ ನಡೆಸುತ್ತಿದ್ದಳು. ಮೇಘನಾ ಫ್ಯಾಮಿಲಿ ಬ್ಯೂಟಿ ಸಲೂನ್​ ಹೆಸರಿನಲ್ಲಿ ಪಾರ್ಲರ್​ ನಡೆಯುತ್ತಿತ್ತು. ಇಬ್ಬರು ಮಹಿಳೆಯರನ್ನು ಕೆಲಸ ಮಾಡಲು ನೇಮಿಸಿಕೊಳ್ಳಲಾಗಿತ್ತು.

ಪಾರ್ಲರ್​ ನಡೆಸುತ್ತಾ ಸುಧಾರಾಣಿ ರಾತ್ರಿ ಉದ್ಯಮಕ್ಕೆ ಎಂಟ್ರಿಕೊಟ್ಟಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಯುವಕರನ್ನು ಸೆಳೆದು ಇಬ್ಬರು ಮಹಿಳೆಯರೊಂದಿಗೆ ವೇಶ್ಯಾವಾಟಿಕೆಯಲ್ಲಿ ಸುಧಾರಾಣಿ ತೊಡಗಿದ್ದಳು. ಈ ಬಗ್ಗೆ ಸ್ಥಳೀಯ ಜನರಿಗೆ ಅನುಮಾನ ಮೂಡಿತ್ತು. ಅಲ್ಲದೆ, ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು.

ಗುರುವಾರ ದಾಳಿ ಮಾಡಿದ ಪೊಲೀಸರು ಸುಧಾರಾಣಿಯ ಜತೆಯಲ್ಲಿ ವೇಶ್ಯಾವಾಟಿಕೆ ಆಯೋಜಿಸುತ್ತಿದ್ದವರನ್ನು ಬಂಧಿಸಿದ್ದಾರೆ. ಇದೇ ವೇಳೆ ಮೂವರು ವಿಧವೆಯರು ಮತ್ತು ಇಬ್ಬರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಇದೇ ವೇಳೆ 4 ಸೆಲ್​ಫೋನ್​ ಮತ್ತು 2,250 ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net