ಐಷಾರಾಮಿ ಕಾರಿನ ಅಪಘಾತ ಪ್ರಕರಣದ ಆರೋಪಿಗಳ ಬಂಧಿಸಲು ಬೆಂಗಳೂರಿಗೆ ತೆರಳಿದ ವಿಶೇಷ ತನಿಖಾ ತಂಡ

car
Published on

ಬಳ್ಳಾರಿ: ಮರಿಯಮ್ಮನಹಳ್ಳಿ ಬಳಿ ಐಷಾರಾಮಿ ಕಾರಿನ ಅಪಘಾತ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡವನ್ನು ರಚಿಸಿದಲಾಗಿದ್ದು, ತಂಡವು ಇಂದು ಬೆಂಗಳೂರಿಗೆ ತೆರಳಿದೆ. ಆರೋಪಿಗಳ ಬಂಧನಕ್ಕಾಗಿ ಬೆಂಗಳೂರಿಗೆ ತೆರಳಿರುವುದಾಗಿ ಮಾಹಿತಿ ಲಭಿಸಿದೆ.

ಸಿಪಿಐ ಶೇಖರಪ್ಪ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು ತಂಡವು ಬೆಂಗಳೂರಿನಲ್ಲಿ ಆರೋಪಿಗಳನ್ನು ಬಂಧಿಸಲಿದ್ದು ಅವರಿಂದ ಮಾಹಿತಿ ಕಲೆ ಹಾಕಲಿದೆ. ಬೆಂಗಳೂರಿನಿಂದ ಹಂಪಿಗೆ ಬರುವ ಮಾರ್ಗದಲ್ಲಿ ಇರುವ ಟೋಲ್​ ಗೇಟ್​ಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ತನಿಖೆ ನಡೆಸುತ್ತಿರುವ ಇನ್ನೊಂದು ತಂಡವು ಅಪಘಾತಕ್ಕೀಡಾದ ಕಾರು ಯಾವ ಯಾವ ಸ್ಥಳಗಳಿಗೆ ಭೇಟಿ ಕೊಟ್ಟಿದೆ ಎನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಮಾಧ್ಯಮಗಳಲ್ಲಿ ಪ್ರಕರಣದ ಕುರಿತಾಗಿ ವರದಿ ಪ್ರಕಟವಾದ ನಂತರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಸೋಮವಾರದಂದು ಹೊಸಪೇಟೆ ಸಮೀಪದ ಮರಿಯಮ್ಮನಹಳ್ಳಿ ಬಳಿ ಮರ್ಸಿಡೆಸ್​ ಬೆಂಜ್​ ಕಾರು ಅಪಘಾತಕ್ಕೀಡಾಗಿತ್ತು. ಆ ಕಾರು ಸಚಿವ ಆರ್​.ಅಶೋಕ್​ ಅವರ ಮಗನಿಗೆ ಸೇರಿದ್ದು ಎಂದು ಸುದ್ದಿಯಾಗಿತ್ತು. ಆದರೆ ಇದೊಂದು ಊಹಾಪೋಹ ಎಂದು ಆರ್​.ಆಶೋಕ್​ ಆರೋಪವನ್ನು ತನ್ನ ಮಗನ ವಿರುದ್ಧದ ಆರೋಪವನ್ನು ತಳ್ಳಿ ಹಾಕಿದ್ದರು. ಅಪಘಾತದಿಂದಾಗಿ ರವಿವರ್ಮ ಹೆಸರಿನ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net