'ಗ್ಯಾರಂಟಿ' ಇಲ್ಲದ ಕುರ್ಚಿಯಿಂದ ಪೊಳ್ಳು ಆಯವ್ಯಯ ಭಾಷಣ ಓದಿದರೇನು? ಆರ್​. ಅಶೋಕ ವ್ಯಂಗ್ಯ

ವಿಜಯವಾಣಿ - 2025-03-03T104647.130
Published on

ಬೆಂಗಳೂರು: ಮಾ.07ರಂದು ತಮ್ಮ 16ನೇ ಬಜೆಟ್​ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ, 2025ರ ಆಯವ್ಯಯದಲ್ಲಿ ರಾಜ್ಯಕ್ಕೆ ಏನೆಲ್ಲಾ ಘೋಷಿಸಲಿದ್ದಾರೆ ಎಂಬ ಕುತೂಹಲ ರಾಜ್ಯದ ಜನತೆಯಲ್ಲಿ ಮೂಡಿದೆ. ಈ ಮಧ್ಯೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರವನ್ನು ವಿಪಕ್ಷ ನಾಯಕ ಆರ್​. ಅಶೋಕ ಟೀಕಿಸಿದ್ದಾರೆ.

"ಸತ್ಯವಿಲ್ಲದ ಭಕ್ತಿಯ ಸಾವಿರ ವರುಷ ಮಾಡಿದರೇನು? ನಿಷ್ಠೆಯಿಲ್ಲದ ಪೂಜೆಯನೇಸುಕಾಲ ಮಾಡಿದರೇನು? ಎಂಬ ವಚನಾಮೃತದಂತೆ, ಹುರುಳಿಲ್ಲದ ಬಜೆಟ್ ಹದಿನಾರು ಮಂಡಿಸಿದರೇನು? ಗ್ಯಾರೆಂಟಿ ಇಲ್ಲದ ಕುರ್ಚಿಯಿಂದ ಪೊಳ್ಳು ಆಯವ್ಯಯ ಭಾಷಣ ಓದಿದರೇನು? ಸಿಎಂ ಸಿದ್ದರಾಮಯ್ಯ ಅವರು ಮಂಡಿಸಲಿರುವ 16ನೇ ಬಜೆಟ್​ನಿಂದ ಕನ್ನಡಿಗರಿಗೆ ಏನೂ ನಿರೀಕ್ಷೆಗಳಿಲ್ಲ" ಎಂದು ಹೇಳಿದರು.

"ಅಸಲಿಗೆ ಸಿದ್ದರಾಮಯ್ಯನವರು ಮಂಡಿಸಲಿರುವ ಈ ಸಾಲಿನ ಬಜೆಟ್ ಅನ್ನು ಅನುಷ್ಠಾನ ಮಾಡಲು ಅವರು ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೋ ಇಲ್ಲವೋ ಎನ್ನುವುದನ್ನು ಮೊದಲು ಕರ್ನಾಟಕದ ಜನತೆಗೆ ಸ್ಪಷ್ಟಪಡಿಸಬೇಕು" ಎಂದು ಟ್ವೀಟ್​ ಮೂಲಕ ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net