ಪ್ರೀತಿಸಿ ಮದ್ವೆಯಾದ ಯುವತಿಗೆ ಇದೆಂಥಾ ಅನ್ಯಾಯ? ಗಂಡನ ಜತೆ ಬಾಡಿಗೆ ಮನೆಗೆ ಹೋದ ಬೆನ್ನಲ್ಲೇ ಬಿಗ್​ ಶಾಕ್​!

Young Girl
Published on

ಚಿತ್ತೂರು: ಮೂರು ದಿನಗಳಿಂದ ನನ್ನ ಪತಿ ಕಾಣುತ್ತಿಲ್ಲ ಎಂದು ಯುವತಿಯೊಬ್ಬಳು ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಘಟನೆ ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ನಡೆದಿದ್ದು, ಅತ್ತೆ ಮನೆಯ ವಿರುದ್ಧ ಆರೋಪ ಮಾಡಿದ್ದಾಳೆ.

ಆಂಧ್ರದ ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲದ ಮೊಹಮ್ಮೆದ್​ ಸನಾ, ಮದನಪಲ್ಲಿ ಗ್ರಾಮೀಣ ವಲಯದ ವಂದ್ಲಪಲ್ಲಿ ಮೂಲದ ರಮೇಶ್​ ಕುಮಾರ್​ ಎಂಬಾತನ್ನು ಮದುವೆ ಆಗಿದ್ದಾಳೆ. ಇಬ್ಬರು ಪ್ರೀತಿಸಿ ಕಳೆದ ಜನವರಿ 4ರಂದು ಮದನಪಲ್ಲಿಯ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ.

ಮದುವೆಯಾದ ಮರು ದಿನದಿಂದಲೇ ಅತ್ತೆ ಮನೆಯವರು ಕಿರುಕುಳ ನೀಡಲು ಆರಂಭಿಸಿದರು ಎಂದು ಸನಾ ಆರೋಪಿಸಿದ್ದಾರೆ. ಮದನಪಲ್ಲಿಯಲ್ಲಿ ಬಾಡಿಗೆ ಮನೆಯೊಂದಕ್ಕೆ ಇತ್ತೀಚೆಗಷ್ಟೇ ಸ್ಥಳಾಂತರವಾದೆವು. ಮೂರು ದಿನಗಳ ಹಿಂದೆ ಹೊರ ಹೋಗಿ ಬರುವುದಾಗಿ ಹೇಳಿ ಹೋದ ರಮೇಶ್​ ಮತ್ತೆ ಮರಳಿ ಬಂದಿಲ್ಲ. ನನ್ನ ಪತಿಯನ್ನು ನನ್ನ ಅತ್ತೆಯೇ ಬಚ್ಚಿಟ್ಟಿದ್ದಾರೆಂದು ಸನಾ ಆರೋಪಿಸಿದ್ದಾರೆ.

ಈ ಸಂಬಂಧ ಸನಾ ಪೊಲೀಸ್​ ಠಾಣೆಯಲ್ಲಿ ದೂರು ಸಹ ಸಲ್ಲಿಸಿದ್ದಾರೆ. ರಮೇಶ್​ನನ್ನು ಬಿಟ್ಟುಬಿಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸನಾ ಹೇಳಿದ್ದಾರೆ. ಇತ್ತ ಸನಾ ವಿರುದ್ಧ ರಮೇಶ್​ ಕುಟುಂಬ ಕೂಡ ದೂರು ದಾಖಲಿಸಿದೆ. ಸನಾ ಕುಟುಂಬವೂ ರಮೇಶ್​ ಕುಟುಂಬದ ವಿರುದ್ಧ ದೂರು ದಾಖಲಿಸಿದೆ. ಎರಡು ದೂರನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net