More

    ಚಿಕನ್​ ಪ್ರಿಯರಿಗೆ ಶಾಕಿಂಗ್​ ನ್ಯೂಸ್​! ಈ ಒಂದು ಕಾರಣದಿಂದ ಕೋಳಿ ಮಾಂಸದ ಬೆಲೆ ಇನ್ನಷ್ಟು ಹೆಚ್ಚಲಿದೆ

    ಹೈದರಾಬಾದ್​: ಮಾಂಸ ಪ್ರಿಯರಿಗೆ ಅದರಲ್ಲೂ ಚಿಕನ್​ ಪ್ರಿಯರಿಗೆ ಇದು ಕಹಿ ಸುದ್ದಿಯಾಗಿದೆ. ಕೆಲವು ದಿನಗಳ ಹಿಂದೆ 200 ರೂಪಾಯಿ ಒಳಗಿದ್ದ ಚಿಕನ್​ ಬೆಲೆ ಇದೀಗ 200ರ ಗಡಿ ದಾಟಿ 300 ರೂಪಾಯಿಯ ಆಸುಪಾಸಿಗೆ ಬಂದಿದ್ದು, ಮಟನ್​ ಬೆಲೆಗೆ ಚಿಕನ್​ ಪೈಪೋಟಿ ನೀಡುತ್ತಿದೆ.

    ಮಟನ್​ಗಿಂತ ಚಿಕನ್​ ತಿನ್ನುವವರ ಸಂಖ್ಯೆ ದೇಶದಲ್ಲಿ ಹೆಚ್ಚಾಗಿದ್ದು, ನಿರಂತರ ದರ ಏರಿಕೆ ಚಿಕನ್​ ಪ್ರಿಯರ ಜೇಬು ಸುಡುತ್ತಿದೆ. ಸದ್ಯ ಹಲವೆಡೆ ಒಂದು ಕೆಜಿ ಚಿಕನ್​ಗೆ 280 ರೂಪಾಯಿ ಇದೆ. ಸ್ಕಿನ್​ಲೆಸ್​​ ಚಿಕನ್​ 300 ರೂಪಾಯಿ ಗಡಿ ದಾಟಿದ್ದು, ಚಿಕನ್​ ಪ್ರಿಯರನ್ನು ಕಂಗಾಲಾಗಿಸಿದೆ.

    ಜೀವಂತ ಕೋಳಿ ಫಾರ್ಮ್​ನಲ್ಲಿ ಪ್ರತಿ ಕೆಜಿಗೆ 100 ರಿಂದ 120 ರೂಪಾಯಿ ಇತ್ತು ಇದೀಗ ಅದೇ ಫಾರ್ಮ್​ಗಳಲ್ಲಿ ಜೀವಂತ ಕೋಳಿ ಬೆಲೆ ಪ್ರತಿ ಕೆಜಿಗೆ 140 ರಿಂದ 150 ರೂಪಾಯಿ ಆಗಿದೆ. ಕೆಲವೇ ದಿನಗಳ ಅಂತರದಲ್ಲಿ ಭಾರೀ ಏರಿಕೆಯಾಗಿರುವುದು ಮಾಂಸ ಪ್ರಿಯರಿಗೆ ಭಾರೀ ನಿರಾಶೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆ ಆಗುವ ಸಾಧ್ಯತೆಯು ಇದೆ.

    ಬೆಲೆ ಏರಿಕೆಗೆ ಕಾರಣ ಏನೆಂದು ನೋಡಿದರೆ, ಪ್ರಮುಖವಾಗಿ ಕೋಳಿಗಳ ಕೊರತೆ. ಕೋಳಿ ಫಾರ್ಮ್​ಗಳ ಸಂಖ್ಯೆ ತುಂಬಾ ವಿರಳವಾಗಿರುವುದರಿಂದ ಕೋಳಿಗಳ ಉತ್ಪಾದನಾ ಕೊರತೆಯಿಂದಾಗಿ ಮಾಂಸದ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎಂದು ಪರಿಣಿತರು ತಿಳಿಸಿದ್ದಾರೆ. (ಏಜೆನ್ಸೀಸ್​)

    ನವಜಾತ ಶಿಶುವಿನಿಂದ ಪುಷ್ಪ ಚಿತ್ರದ ತಗ್ಗೆದೆಲೆ ಸ್ಟೈಲ್​ ಕಾಪಿ: ಸಿಕ್ಕಾಪಟ್ಟೆ ವೈರಲ್​ ಆಯ್ತು​ ವಿಡಿಯೋ!

    ಪತಿಯ ಮರ್ಮಾಂಗಕ್ಕೆ ಒದ್ದು ಕೊಲೆಗೈದ ಪತ್ನಿ: ಪ್ರಕರಣದಿಂದ ತಪ್ಪಿಸಿಕೊಳ್ಳಲು ಕಟ್ಟು ಕತೆ ಕಟ್ಟಿ ಸಿಕ್ಕಿಬಿದ್ದಳು!

    ಈ ಪ್ರಾಣಿಗೆ ಹೆದರಿ ಜೀವ ಉಳಿಸಿಕೊಳ್ಳಲು ಮರವೇರಿದ ಕಾಡಿನ ರಾಜ: ವಿಡಿಯೋ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts