

ಲಂಡನ್: ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ಹಾಲಿವುಡ್ನ ಪ್ರಖ್ಯಾತ ನಟಿ ಮತ್ತು ಆಕೆಯ ಪತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರು ತಪ್ಪಿತಸ್ಥರೆಂದು ತಿಳಿದುಬಂದಿದೆ.
2016ರಲ್ಲಿ ಜಾಗತಿಕವಾಗಿ ತೆರೆಕಂಡು ಅತ್ಯದ್ಭುತ ಯಶಸ್ಸು ಗಳಿಸಿದ ನಟ ಬೆನೆಡಿಕ್ಟ್ ಕಂಬರ್ಬ್ಯಾಚ್ ಅಭಿನಯದ ಡಾಕ್ಟರ್ ಸ್ಟ್ರೇಂಜ್ ಚಿತ್ರದಲ್ಲಿ ನಟಿಸಿರುವ ಝರಾ ಪೈಥಿಯನ್ ಮತ್ತು ಆಕೆಯ ಗಂಡ ವಿಕ್ಟರ್ ಮಾರ್ಕ್ (59) ವಿರುದ್ಧ ಆರೋಪ ಕೇಳಿಬಂದಿದೆ.
ಝರಾ ಪೈಥಿಯನ್ ಓರ್ವ ಮಾರ್ಷಲ್ ಆರ್ಟಿಸ್ಟ್. ಡಾಕ್ಟರ್ ಸ್ಟ್ರೇಂಜ್ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದಾರೆ. 2002 ಮತ್ತು 2003ರಲ್ಲಿ ನಾನು 13ನೇ ವಯಸ್ಸಿನವಳಿದ್ದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸ್ಟಾರ್ ನಟಿ ಹಾಗೂ ಆಕೆಯ ಗಂಡನ ವಿರುದ್ಧ ಹುಡುಗಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ.
ನ್ಯಾಯಾಲಯದ ಮುಂದೆ ಹಾಜರಾಗಿ ಸಂತ್ರಸ್ತೆ ಕ್ಯಾಮೆರಾ ಮುಂದೆಯೇ ಹೇಳಿಕೆ ನೀಡಿದ್ದಾಳೆ. ನಾನು ಮಾಡುತ್ತಿರುವುದು ತಪ್ಪು ಎಂದು ನನಗೆ ಅನಿಸಿತು. ಆದರೆ, ಆ ಪರಿಸ್ಥಿತಿಯಿಂದ ಹೊರಬರಲು ಹಾಗೂ ಏನಾದರೂ ಹೇಳಲು ನನಗೆ ಗೊತ್ತಾಗಲಿಲ್ಲ. ನಟಿ ಐರಾ ತನ್ನ ಗಂಡನ ಜತೆ ಓರಲ್ ಸೆಕ್ಸ್ ನಡೆಸುವಂತೆ ಒತ್ತಾಯಿಸಿದಳು ಮತ್ತು ತದನಂತರ ಇಬ್ಬರೊಂದಿಗೂ ಝರಾ ಪತಿ ದೈಹಿಕ ಸಂಭೋಗವನ್ನು ನಡೆಸಿದರು ಎಂದು ಹುಡುಗಿ ಹೇಳಿದ್ದಾಳೆ.
ಬಾಲಕಿಯ ಮೇಲಿನ 14 ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನಟಿ ಮತ್ತು ಆಕೆಯ ಪತಿ ತಪ್ಪಿತಸ್ಥರೆಂದು ನ್ಯಾಯಾಲಯ ಇದೀಗ ತೀರ್ಪು ನೀಡಿದೆ. ಇದಿಷ್ಟೇ ಅಲ್ಲದೆ, 2005 ಮತ್ತು 2008ರ ನಡುವೆ ಮತ್ತೊಂದು ಹುಡುಗಿಯ ಮೇಲೆಯೂ ದೌರ್ಜನ್ಯ ನಡೆಸಿರುವುದು ಬೆಳಕಿಗೆ ಬಂದಿದೆ. (ಏಜೆನ್ಸೀಸ್)