ಕಿಟಕಿ ತೆಗೆಯಲು KSRTC ಬಸ್​ ಚಾಲಕನ ಸಹಾಯ ಕೋರಿದ ಬೆಂಗ್ಳೂರು ವಿದ್ಯಾರ್ಥಿನಿಗೆ ಕಾದಿತ್ತು ಶಾಕ್!​

KSRTC
Published on

ಪತ್ತನಂತಿಟ್ಟ: ಕೆಎಸ್​ಆರ್​ಟಿಸಿ ಸೂಪರ್​ ಡಿಲಕ್ಸ್​ ಬಸ್ಸಿನೊಳಗೆ ಪ್ರಯಾಣಿಕರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಆರೋಪದ ಮೇಲೆ ಚಾಲಕನ ವಿರುದ್ಧ ದೂರು ದಾಖಲಾಗಿದೆ.

ಈ ಘಟನೆ ಶನಿವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಪತ್ತನಂತಿಟ್ಟ ಡಿಪೋದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸೂಪರ್​ ಡೀಲಕ್ಸ್​ ಬಸ್ಸಿನಲ್ಲಿ ನಡೆದಿದೆ ಎನ್ನಲಾಗಿದೆ. ಸಂತ್ರಸ್ತೆ ವಿದ್ಯಾರ್ಥಿನಿಯಾಗಿದ್ದು, ಆಕೆ ಬೆಂಗಳೂರಿನ ಖಾಯಂ ನಿವಾಸಿ. ಈಮೇಲ್​ ಮೂಲಕ ವಿದ್ಯಾರ್ಥಿನಿ ಕೇರಳ ಪೊಲೀಸರಿಗೆ ದೂರು ನೀಡಿದ್ದಾಳೆ.

ಸಂತ್ರಸ್ತ ವಿದ್ಯಾರ್ಥಿನಿ ಕಿಟಕಿ ಬಾಗಿಲು ತೆರೆಯಲು ಚಾಲಕನ ಸಹಾಯ ಕೋರಿದಾಗ ಈ ಘಟನೆ ನಡೆದಿದೆ. ಕಿಟಕಿ ತೆಗೆಯುವ ನೆಪದಲ್ಲಿ ಚಾಲಕ ಎಲ್ಲೆಲ್ಲೂ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸುವುದನ್ನು ನೋಡಿ ವಿದ್ಯಾರ್ಥಿನಿ ಗಾಬರಿಯಾಗಿದ್ದಾಳೆ. ಆಕೆ ಆ ಸಮಯದಲ್ಲಿ ಅಸಹಾಯಕಳಾಗಿದ್ದು, ಚಾಲಕನ ವರ್ತನೆಗೆ ವಿರುದ್ಧವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ.

ಇದೀಗ ಚಾಲಕ ಶಾಜಹನ್​ ವಿರುದ್ಧ ದೂರು ದಾಖಲಾಗಿದ್ದು, ವಿಜಿಲೆನ್ಸ್​ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ. ಕೃಷ್ಣಗಿರಿ ಸಮೀಪದಲ್ಲಿ ಶನಿವಾರ ಘಟನೆ ನಡೆಯಿತು ಎಂದು ಸಂತ್ರಸ್ತೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net