ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಜಮೀನಿಗೆ ತೆರಳುತ್ತಿದ್ದ ಇಬ್ಬರು ರೈತರು-ಹಸು ಸ್ಥಳದಲ್ಲೇ ಸಾವು

accident
Published on

ಕೊಪ್ಪಳ: ಹಸು ಹಿಡಿದುಕೊಂಡು ಜಮೀನಿಗೆ ಹೋಗುತ್ತಿದ್ದ ರೈತರಿಬ್ಬರ ಹಿಂಬದಿಯಿಂದ ಓಮ್ನಿ ಕಾರು ಡಿಕ್ಕಿ ಹೊಡೆದ ಪರಿಣಾಮ ರೈತರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಸು ಕೂಡ ದುರಂತ ಅಂತ್ಯ ಕಂಡಿದೆ.

ಇಂತಹ ದುರ್ಘಟನೆ ಕೊಪ್ಪಳ‌ ಜಿಲ್ಲೆ ಯಲಬುರ್ಗಾ ತಾಲೂಕು ಗುನ್ನಾಳ ಗ್ರಾಮದ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ. ಗುನ್ನಾಳ ಗ್ರಾಮದ ರೈತರಾದ ಹೊಳೆಯಪ್ಪ(48) ಮತ್ತು ರಾಮಣ್ಣ (42) ಮೃತರು. ಇವರಿಗೆ ಸೇರಿದ ಹಸು ಕೂಡ ಅಪಘಾತದಲ್ಲಿ ಮೃತಪಟ್ಟಿದೆ. ಶೇಂಗಾ ಕೀಳಲು ಜಮೀನಿಗೆ ಇವರಿಬ್ಬರೂ ಹೋಗುತ್ತಿದ್ದರು. ವೇಳೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ರೈತರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಪಘಾತದ ಭೀಕರತೆ ಕಂಡ ಸ್ಥಳೀಯರು ಬೆಚ್ಚಿಬಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತದ ನಂತರ ಕಾರನ್ನೇ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಬೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net