ಒಂದೆಡೆ ಸಾವು-ನೋವು, ಇತ್ತ ಅಂದುಕೊಂಡ ಗುರಿ ಸಾಧಿಸಿದ ಖುಷಿಯಲ್ಲಿ ಎಂಜಾಯ್​ ಮಾಡ್ತೀರೋ ತಾಲಿಬಾನಿಗಳು!​

Taliban
Published on

ಕಾಬುಲ್​: ಕಳೆದ ಒಂದು ತಿಂಗಳಿಂದ ಆಫ್ಘಾನಿಸ್ತಾನದಲ್ಲಿ ರಕ್ತದೊಕುಳಿ ಆಡಿ ಇಡೀ ದೇಶವನ್ನೇ ತನ್ನ ತೆಕ್ಕೆಗೆ ಹಾಕಿಕೊಂಡಿರುವ ತಾಲಿಬಾನ್​ ಬಂಡುಕೋರರು ಇದೀಗ ಸಖತ್​ ಎಂಜಾಯ್​ ಮೂಡ್​ನಲ್ಲಿದ್ದಾರೆ. ಆಫ್ಘಾನ್​ ರಾಜಧಾನಿ ಕಾಬುಲ್​ ವಶಪಡಿಸಿಕೊಂಡ ಬೆನ್ನಲ್ಲೇ ಅಲ್ಲಿನ ಅಮ್ಯೂಸ್​ಮೆಂಟ್​ ಪಾರ್ಕ್​ನಲ್ಲಿ ಬಂಡುಕೋರರು ಸಖತ್​ ಎಂಜಾಯ್​ ಮಾಡುತ್ತಿದ್ದಾರೆ.

ತಮ್ಮ ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದುಕೊಂಡೇ ತಾಲಿಬಾನ್​ ಹೋರಾಟಗಾರರು ಎಲೆಕ್ಟ್ರಿಕ್​ ಬಂಪರ್​ ಕಾರು ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಅಲ್ಲದೆ, ಮತ್ತೊಂದು ವಿಡಿಯೋದಲ್ಲಿ ಪಾರ್ಕಿನಲ್ಲಿರುವ ಆಟದ ಕುದುರೆಯನ್ನು ರೈಡ್​ ಮಾಡುತ್ತಿರುವ ದೃಶ್ಯವಿದೆ.

ಇದು ಅಫ್ಘಾನಿಸ್ತಾನದ ಜನರಲ್ಲಿ ಭಯಾನಕತೆಯನ್ನು ಸೆರೆಹಿಡಿದ ವೀಡಿಯೊಗೆ ತುಂಬಾ ವ್ಯತಿರಿಕ್ತವಾಗಿದೆ. ಅಂದರೆ ಒಂದು ಕಡೆ ನೂರಾರು ಆಫ್ಘಾನ್​ ಪ್ರಜೆಗಳು ಪ್ರಾಣ ಭಯದಿಂದ ಕಾಬುಲ್ ವಿಮಾನ ನಿಲ್ದಾಣದಲ್ಲಿ ಯುಎಸ್​ ವಿಮಾನವನ್ನೇರಲು ನೂಕು ನುಗ್ಗಲಾದರೆ, ಇನ್ನೊಂದೆಡೆ ತಾಲಿಬಾನ್​ ದಂಗೆಕೋರರು ಅಂದುಕೊಂಡ ಗುರಿ ಸಾಧಿಸಿದೆವು ಎಂಬ ಖುಷಿಯಲ್ಲಿ ಎಂಜಾಯ್​ ಮಾಡುತ್ತಿದ್ದಾರೆ.

ಇನ್ನು ಯುಎಸ್​ ಸೇನಾ ವಿಮಾನದಲ್ಲಿ ತೂರಿಕೊಂಡ ಯುವಕರು ಹೆಚ್ಚಾಗಿ ಅಫ್ಘಾನಿಸ್ತಾನದಲ್ಲಿ ಅಮೆರಿಕ ಸರ್ಕಾರಕ್ಕೆ ಸಹಾಯ ಮಾಡಿದವರು ಎನ್ನಲಾಗಿದೆ. ಅವರಲ್ಲಿ ಕೆಲವರು ಅನುವಾದಕರಾಗಿದ್ದು, ರಾಷ್ಟ್ರವು ನಿಯಂತ್ರಣದಲ್ಲಿದ್ದಾಗ ಯುಎಸ್‌ಗೆ ಸಹಾಯ ಮಾಡಿದರು ಎಂದು ತಿಳಿದುಬಂದಿದೆ. ಒಂದು ಕಡೆ ಸಾವು-ನೋವು, ಇನ್ನೊಂದು ಕಡೆ ನಗುವಿನ ಕೇಕೆ... ನಿಜಕ್ಕೂ ಆಫ್ಘಾನ್​ ನರಕಕೂಪವಾಗಿದೆ. ಅಲ್ಲಿನ ಪರಿಸ್ಥಿತಿ ಯಾವಾಗ ಸುಧಾರಣೆ ಆಗುತ್ತದೆ ಎಂದು ಅಲ್ಲಿನ ಜನರು ಆಶಾಭಾವನೆಯಲ್ಲೇ ದಿನ ದೂಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net