More

    ಆಫ್ಘಾನ್​ನಲ್ಲಿ ತಾಲಿಬಾನ್​ ರಕ್ತಚರಿತ್ರೆ: ಕೊನೆಗೂ ಮೌನ ಮುರಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಹೇಳಿದ್ದು ಹೀಗೆ..

    ಕಾಬುಲ್​: ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ರಕ್ತ ಚರಿತ್ರೆ ಆರಂಭವಾಗಿದೆ. ಅಮೆರಿಕ ಸೇನಾ ಹಿಂತೆಗೆತ ಬಳಿಕ ಆಫ್ಘಾನ್​​ ಮೇಲಿನ ಆಕ್ರಮಣವನ್ನು ಆರಂಭಿಸಿದ ತಾಲಿಬಾನ್​ ಬಂಡುಕೋರರು ರಕ್ತದೋಕುಳಿ ಬರೆದು ಇಂದು ಇಡೀ ಆಫ್ಘಾನ್​ ರಾಷ್ಟ್ರವನ್ನೇ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಅಮೆರಿಕ ಸೇನೆ ಹಿಂಪಡೆದಿದ್ದಕ್ಕೆ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಅದಕ್ಕೆ ಸಮರ್ಥನೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ನನ್ನ ನಿರ್ಧಾರಕ್ಕೆ ನಾನು ಬದ್ಧ ಎಂಬ ಮಾತುಗಳನ್ನಾಡಿದ್ದಾರೆ.

    ಸೋಮವಾರ ಮಾಧ್ಯಮಗಳ ಮುಂದೆ ಮೊದಲ ಬಾರಿಗೆ ಆಫ್ಘಾನ್​ ಸಂಘರ್ಷದ ಬಗ್ಗೆ ಜೋ ಬೈಡೆನ್​ ಮೌನ ಮುರಿದರು. ಆಫ್ಘಾನ್​ ನೆಲದಿಂದ ತಮ್ಮ ಸೇನೆಯನ್ನು ವಾಪಸ್​ ಪಡೆದ ನಿರ್ಧಾರಕ್ಕೆ ನಾನು ಈಗಲೂ ಬದ್ಧ ಎಂದು ಮಾತು ಆರಂಭಿಸಿದ ಬೈಡೆನ್​, ಯುಎಸ್ ಸೈನ್ಯವನ್ನು ಹಿಂತೆಗೆದುಕೊಳ್ಳಲು ಈ ಹಿಂದೆಯೇ ಆಗಿದ್ದ ಒಪ್ಪಂದಕ್ಕೆ ಅಂಟಿಕೊಳ್ಳುವುದು ಅಥವಾ ಮೂರನೇ ದಶಕದ ಯುದ್ಧವನ್ನು ಮಾಡಲು ಸಾವಿರಾರು ಸೇನಾ ಸದಸ್ಯರನ್ನು ಮತ್ತೆ ಅಫ್ಘಾನಿಸ್ತಾನಕ್ಕೆ ಕಳುಹಿಸುವುದು, ಇವೆರಡು ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಅಲ್ಲದೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಲಿಬಾನ್ ಜೊತೆ ಮಾಡಿಕೊಂಡ ಒಪ್ಪಂದವನ್ನು ಅವರು ಹಿಂಪಡೆದಿದ್ದಾರೆ. ಈ ಪ್ರಕಾರ ಮೇ 1ರ ನಂತರ ಅಫ್ಘಾನಿಸ್ತಾನದಲ್ಲಿ ಯುಎಸ್ ಪಡೆಗಳನ್ನು ರಕ್ಷಿಸುವ ಕದನ ವಿರಾಮ ಅಥವಾ ಯಾವುದೇ ಒಪ್ಪಂದ ಇರಲಿಲ್ಲ ಎಂದರು.

    ಪ್ರಸ್ತುತ ಸಮಸ್ಯೆಯನ್ನು ಮುಂದಿನ ಮತ್ತೊರ್ವ ಯುಎಸ್ ಅಧ್ಯಕ್ಷರಿಗೆ ರವಾನಿಸುವುದಕ್ಕಿಂತ ಪ್ರಸ್ತುತ ಟೀಕೆಗಳನ್ನು ತೆಗೆದುಕೊಳ್ಳಲು ನಾನು ಬಯಸುತ್ತೇನೆ ಎಂದಿರುವ ಬೈಡೆನ್​, ಇಪ್ಪತ್ತು ವರ್ಷಗಳ ನಂತರ ಯುಎಸ್ಎ ಸುದೀರ್ಘ ಯುದ್ಧವನ್ನು ಕೊನೆಗೊಳಿಸುವ ಸಮಯ ಬಂದಿದೆ ಮತ್ತು ಇದು ತನ್ನ ರಾಷ್ಟ್ರದ ಸರಿಯಾದ ನಿರ್ಧಾರ ಎಂದು ಸಮರ್ಥನೆ ನೀಡಿದ್ದಾರೆ.

    ಇದೇ ವೇಳೆ ಆಫ್ಘಾನ್​ನಲ್ಲಿ ಕಂಡುಬರುತ್ತಿರುವ ಕರುಳು ಹಿಂಡು ದೃಶ್ಯಗಳ ಬಗ್ಗೆ ಮಾತನಾಡಿ, ದುಃಖವೂ ಆಳವಾಗಿದೆ. ವೈಯಕ್ತಿಕವಾಗಿಯೂ ನನಗೆ ತುಂಬಾ ನೋವಾಗುತ್ತಿದೆ ಎಂದರು. ಸೇನೆ ಹಿಂಪಡೆಯುವ ನಿರ್ಧಾರ ಸರ್ಕಾರದ್ದು, ಟ್ರಂಪ್​ ಮಾಡಿದ ಆದೇಶವನ್ನು ನಾನು ಜಾರಿಗೆ ತಂದಿದ್ದೇನೆ.

    20 ವರ್ಷಗಳಲ್ಲ ಎಷ್ಟೇ ವರ್ಷಗಳು ಅಮೆರಿಕ ಸೇನಾ ಪಡೆ ಅಲ್ಲಿದ್ದರೆ ಪರಿಸ್ಥಿತಿ ಬದಲಾಗಲ್ಲ. ಈಗಾಗಲೇ ತಾಲಿಬಾನ್​ ವಿರುದ್ಧ ಅಮೆರಿಕ ಸಾಕಷ್ಟು ಡಾಲರ್​ ಖರ್ಚು ಮಾಡಿದೆ. ನಮ್ಮ 20 ವರ್ಷದ ಹೋರಾಟ ವ್ಯರ್ಥವಾಗಿದೆ. ಎಷ್ಟೇ ವರ್ಷ ರಕ್ಷಣೆ ನೀಡಿದರು ಆಫ್ಘಾನಿಸ್ತಾನದಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ. ಇನ್ನು 20 ವರ್ಷ ಆದ್ರೂ ತಾಲಿಬಾನ್​ ದುರ್ಬಲವಾಗುವುದಿಲ್ಲ. ಇಲ್ಲಿವರೆಗೂ ಯುಎಸ್​ ಪಡೆಗಳು ಅವರ ಭಾರವನ್ನು ಹೊತ್ತಿಕೊಂಡಿತ್ತು. ಆಫ್ಘಾನ್​ ನಂಬಿ ನನ್ನ ಸೇನೆಯನ್ನು ನಾನು ಬಲಿ ಕೊಡಲಾರೆ ಎಂದು ಬೈಡೆನ್​ ಹೇಳಿದರು..

    ಆಫ್ಘಾನಿಸ್ತಾನದಲ್ಲಿರುವ ಅಮೆರಿಕನ್ನರ ರಕ್ಷಣೆಗೆ ನಾವು ಬದ್ಧರಾಗಿದ್ದೇನೆ. ಇದಕ್ಕೆ ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆ ನಡೆಯಲಿದೆ. ಈ ವೇಳೆ ತಾಲಿಬಾನ್​ ನಮ್ಮ ವಿರುದ್ಧ ದಾಳಿ ಮಾಡಿದರೆ ತಕ್ಕಶಾಸ್ತಿ ಆಗಲಿದೆ ಎಂದು ಹೇಳಿದರು. (ಏಜೆನ್ಸೀಸ್​)

    ತವರಿನ ಪರಿಸ್ಥಿತಿ ಕಂಡು ಮರುಗುತ್ತಿದ್ದಾರೆ ಆಫ್ಘನ್ ನ ಸ್ಟಾರ್ ಕ್ರಿಕೆಟಿಗ..!

    ಮದುವೆ ನನ್ನ ವೈಯಕ್ತಿಕ ವಿಚಾರ; ಸೋತು ಗೆದ್ದ ಅರವಿಂದ್

    ‘ಶುಗರ್​ಲೆಸ್‌’ ಚಿತ್ರದ ಪಾತ್ರಗಳನ್ನು ಪರಿಚಯಿಸಲಿರುವ ಶರಣ್ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts