ರಾತ್ರಿ ಫಾರ್ಮ್​ ಹೌಸ್​ಗೆ ತೆರಳಿದ ಪೊಲೀಸರಿಗೆ ಶಾಕ್​! 15 ಯುವತಿಯರು ಸೇರಿದಂತೆ 61 ಮಂದಿ ಬಂಧನ

UP Police
Published on

ನೊಯ್ಡಾ (ಉತ್ತರ ಪ್ರದೇಶ): ಕರೊನಾ ಲಾಕ್​ಡೌನ್ ನಡುವೆಯೂ ಯಾವುದೇ ಅನುಮತಿ ಇಲ್ಲದೆ ಪಾರ್ಟಿಯಲ್ಲಿ ತೊಡಗಿದ್ದ 15 ಯುವತಿಯರು ಸೇರಿ 61 ಮಂದಿಯನ್ನು ಬಂಧಿಸಿರುವ ಘಟನೆ ಥಾನಾ ಹೆದ್ದಾರಿಯ ಸೆಕ್ಟರ್​-135ರಲ್ಲಿನ ಚೌಧರಿ ಫಾರ್ಮ್​ ಹೌಸ್​ನಲ್ಲಿ ನಡೆದಿದೆ.

ಯುವಕ-ಯುವತಿಯರು ಮಾತ್ರವಲ್ಲದೇ ಪಾರ್ಟಿಯನ್ನು ಆಯೋಜಿಸಿದ್ದ ಐವರನ್ನು ಸಹ ನೊಯ್ಡಾ ಪೊಲೀಸರು ಬಂಧಿಸಿದ್ದಾರೆ. ಎಲ್ಲರು ಸಹ ಪಾನಮತ್ತ ಸ್ಥಿತಿಯಲ್ಲಿದ್ದು, ಸ್ಥಳದಲ್ಲಿ ಭಾರಿ ಪ್ರಮಾಣದ ಹರಿಯಾಣ ಮರ್ಕಾ ಮದ್ಯವನ್ನು ಪತ್ತೆಹಚ್ಚಲಾಗಿದೆ. ಪೊಲೀಸರು ಮಾತ್ರವಲ್ಲದೆ ಬಂಧಿತರ ವಿರುದ್ಧ ಅಬಕಾರಿ ಇಲಾಖೆಯು ಸಹ ಪ್ರಕರಣ ದಾಖಲಿಸಿಕೊಂಡಿದೆ.

ಪ್ರಕರಣ ಸಂಬಂಧ ಮಾತನಾಡಿರುವ ಉಪ ಪೊಲೀಸ್​ ಆಯುಕ್ತ ರಾಜೇಶ್​ ಎಸ್​, ಲಾಕ್​ಡೌನ್​ ಹೊರತಾಗಿಯು ಬಹುದೊಡ್ಡ ಸಂಖ್ಯೆಯಲ್ಲಿ ಭಾನುವಾರ ರಾತ್ರಿ ಥಾಣಾ ಹೆದ್ದಾರಿಯ ಸೆಕ್ಟರ್​ 135ರಲ್ಲಿರುವ ಚೌಧರಿ ಫಾರ್ಮ್​ ಹೌಸ್​ನಲ್ಲಿ ಸೇರಿ ಪಾರ್ಟಿ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಪಾರ್ಮ್​ ಹೌಸ್​ಗೆ ಆಗಮಿಸಿದೆವು. ಫಾರ್ಮ್​ ಹೌಸ್​ ರಿತೇಶ್​ ಛದಾ ಹೆಸರಿನಲ್ಲಿದೆ ಎಂದು ತಿಳಿಸಿದರು.

ಈ ವೇಳೆ 46 ಪುರುಷರು ಹಾಗೂ 15 ಯುವತಿಯರನ್ನು ಬಂಧಿಸಲಾಗಗಿದೆ. ಪಾರ್ಟಿ ಆಯೋಜನೆ ಮಾಡಿದ್ದ ಸೊಹೈಲ್​, ಅಂಕುರ್​, ಬಿಲಾಲ್​, ವಕಿಲ್​, ಶಹನವಾಜ್​ ಹಾಗೂ ಧರ್ಮಾವೀರ್ ಎಂಬುವರನ್ನು ಬಂಧಿಸಲಾಗಿದೆ. ಈ ವೇಳೆ ಭಾರಿ ಪ್ರಮಾಣ ಹರಿಯಾನ ಮರ್ಕಾ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಪಾರ್ಟಿ ಆಯೋಜಿಸಿದವರು ಹಾಗೂ ಅದರಲ್ಲಿ ಭಾಗವಹಿಸಿದವರ ಮೇಲೆ ಕಠಿಣ ಕ್ರಮವನ್ನು ಜರಗಿಸಲಾಗುವುದು ಎಂದು ಡಿಎಸ್​ಪಿ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net