ಕಾಬೂಲ್​ ಮದರಸಾ ಒಳಗೆ ಭಾರಿ ಸ್ಫೋಟ: 20 ಮಂದಿ ದುರ್ಮರಣ, 40ಕ್ಕೂ ಹೆಚ್ಚ ಜನರ ಸ್ಥಿತಿ ಗಂಭೀರ

Masjid
Published on

ಕಾಬೂಲ್​: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿರುವ ಮದರಸಾ ಒಂದರ ಒಳಗೆ ಬುಧವಾರ ಸಂಭವಿಸಿದ ಭಾರಿ ಪ್ರಮಾಣದ ಸ್ಫೋಟದಿಂದಾಗಿ 20 ಮಂದಿ ಮೃತಪಟ್ಟಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಈ ಘಟನೆ ವಾಯುವ್ಯ ಕಾಬೂಲ್​ನ ಕೊತಾಲ್​-ಇ- ಖೈರ್​ ಖಾನಾದಲ್ಲಿ ನಡೆದಿದೆ. ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖೈರ್ ಖಾನಾ ಪ್ರದೇಶದಲ್ಲಿ ಸಂಜೆ ಪ್ರಾರ್ಥನೆ ವೇಳೆ ಸಂಭವಿಸಿದ ಸ್ಫೋಟದಲ್ಲಿ ಮಸೀದಿಯ ಇಮಾಮ್ ಸಹ ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಕಾಬೂಲ್​ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

ಯಾರೂ ಕೂಡ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಘಟನೆ ಬಗ್ಗೆ ಮಾತನಾಡಿರುವ ಕಾಬೂಲ್​ ಸೆಕ್ಯುರಿಟಿ ಕಮ್ಯಾಂಡ್​ ವಕ್ತಾರ ಖಲೀದ್​ ಜದ್ರಾನ್​, ಘಟನಾ ಸ್ಥಳಕ್ಕೆ ರಕ್ಷಣಾ ಪಡೆಗಳು ಆಗಮಿಸಿದ್ದು, ರಕ್ಷಣಾ ಮತ್ತು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net