ಎದ್ದು-ಬಿದ್ದು ಮುಗಿಬಿದ್ದ ಮದ್ಯಪ್ರಿಯರು! ಒಂದೇ ದಿನ ಭರ್ಜರಿ ಆದಾಯ

wineshop
Published on

ಬೆಂಗಳೂರು: ಕಳೆದ ತಿಂಗಳ ಲಾಕ್‌ಡೌನ್‌ನಿಂದಾಗಿ ಮದ್ಯ ಸಿಗದೇ ಒದ್ದಾಡಿದ್ದ ಹಲವಾರು ಮದ್ಯಪ್ರಿಯರು ಈ ಬಾರಿಯೂ ಹಾಗೆಯೇ ಆಗಿಬಿಡುತ್ತದೆ ಎಂಬ ಕಾರಣದಿಂದ ಸೋಮವಾರ ಬಹುತೇಕ ವೈನ್‌ ಶಾಪ್‌ಗಳ ಎದುರು ಜನರು ಕಿಕ್ಕಿರಿದು ತುಂಬಿಹೋಗಿದ್ದರು.

ಎಂಆರ್‌ಪಿ ಮದ್ಯದ ಮಳಿಗೆಗಳಲ್ಲಿ ಪಾರ್ಸೆಲ್‌ ತೆಗೆದಕೊಂಡು ಹೋಗಲು ಅವಕಾಶ ನೀಡಿ ಅದಕ್ಕೆ ಟೈಂ ಫಿಕ್ಸ್‌ ಮಾಡಿದ್ದರೂ, ಜನರು ಯಾವುದನ್ನೂ ನಂಬದೇ ಸಿಕ್ಕಷ್ಟು ಸಿಗಲಿ ಎಂದು ಮುಗಿಬಿದ್ದು ಖರೀದಿ ಮಾಡಿದ್ದಾರೆ. ಲಾಕ್‌ಡೌನ್‌ ಒಂದೇ ವಾರ ಎಂದು ಹೇಳಿದ್ದರೂ, ಯಾವುದರ ಮೇಲೂ ನಂಬಿಕೆ ಇಡದ ಜನ, ಮುಂದಿನ ಕೆಲವು ವಾರಗಳವರೆಗೆ ’ಸೇಫ್‌’ ಆಗಿರಲು ಮದ್ಯ ಖರೀದಿ ಮಾಡಿದ್ದಾರೆ. ಬಹುತೇಕ ಎಲ್ಲಾ ಮಳಿಗೆಗಳ ಮುಂದೆ ಭಾರಿ ಕ್ಯೂ ಕಂಡಿದೆ.

ಇದೇ ಕಾರಣಕ್ಕೆ ನಿನ್ನೆ ಅಂದರೆ ಸೋಮವಾರ ಒಂದೇ ದಿನ 230 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. 215 ಕೋಟಿ ರೂ ಮೌಲ್ಯದ ಇಂಡಿಯನ್ ಮೇಡ್ ಲಿಕ್ಕರ್ ( ಐಎಂಎಲ್) ಹಾಗೂ 15 ಕೋಟಿ ರೂ. ಮೌಲ್ಯದ ಬಿಯರ್ ಮಾರಾಟ ಆಗಿರುವುದಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಹಣ್ಣು, ತರಕಾರಿ, ಮಾಂಸದಂಗಡಿಗಳ ಮುಂದೆ ಕೂಡ ಜನರ ಗುಂಪು ಕಂಡುಬಂದಿದೆ. ಇವುಗಳ ಮಾರಾಟಕ್ಕೆ ಲಾಕ್‌ಡೌನ್‌ ವೇಳೆಯಲ್ಲಿ ಅನುಮತಿ ನೀಡಲಾಗಿದ್ದರೂ ಜನರ ಖರೀದಿ ಜೋರಾಗಿಯೇ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net