More

    ಇಂದು ರಾತ್ರಿಯಿಂದ ಲಾಕ್‌ಡೌನ್‌: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಡಿಟೇಲ್ಸ್‌

    ಬೆಂಗಳೂರು: ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸಿರುವ ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಒಂದು ವಾರದ ಕಾಲ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡಲು ರಾಜ್ಯ ಸರ್ಕಾರ ಇದಾಗಲೇ ಅಧಿಸೂಚನೆ ಹೊರಡಿಸಿದೆ.

    ಈಗಾಗಲೇ ನಿಗದಿಯಾಗಿರುವಂತೆ ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 22ರ ಸಂಜೆ 5 ಗಂಟೆ ತನಕ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿರುತ್ತದೆ.

    ಇದಕ್ಕೆ ಸಂಬಂಧಿಸಿದಂತೆ ಇಂದು ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಈಗಾಗಲೇ ಘೋಷಿಸಿರುವ ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಉಳಿದು ಭಾಗಗಳಲ್ಲಿ ಕೆಲವು ವಿನಾಯ್ತಿಗಳನ್ನೂ ನೀಡಲಾಗಿದೆ.

    ಕರೊನಾ ವಾರಿಯಸ್‌ರ್ಗಳಿಗೆ ಮಾತ್ರ ಓಡಾಟಕ್ಕೆ ಅವಕಾಶವಿದ್ದು, ಜನರು ಕರ್ನಾಟಕದ ಹೊರಗೆ ಹೋಗಬೇಕಾದರೆ ಸೇವಾ ಸಿಂಧು ಮೂಲಕ ಪಾಸ್ ಪಡೆಯಬೇಕು ಎಂದು ತಿಳಿಸಲಾಗಿದೆ.
    ಇನ್ನು ಮದುವೆ ಇನ್ನಿತರ ಕಾರ್ಯಕ್ರಮಕ್ಕೆ ಅವಕಾಶ ಪಡೆಯಬೇಕು, ವಿಕಾಸಸೌಧ ಹಾಗೂ ವಿಧಾನಸೌಧದಲ್ಲಿ 50 ಪರ್ಸೆಂಟ್ ಸಿಬ್ಬಂದಿ ಮಾತ್ರ ಕೆಲಸ ಮಾಡಲು ಅನುಮತಿ ಕೊಡಲಾಗಿದೆ.

    ಏನೇನಿರುತ್ತೆ ..?
    * ನಿಗದಿತ ದಿನಾಂಕದಂದೇ ಪರೀಕ್ಷೆ ನಡೆಯುತ್ತವೆ. ಪ್ರವೇಶ ಪತ್ರವನ್ನೇ ತೋರಿಸಿ ಟ್ಯಾಕ್ಸಿ, ಆಟೊರಿಕ್ಷಾ ಒಳಗೊಂಡಂತೆ ಸಾರಿಗೆ ವ್ಯವಸ್ಥೆ ಬಳಸಿಕೊಳ್ಳಬಹುದು.
    * ಕಚೇರಿಗೆ ಹೋಗುವವರು ತಮ್ಮ ಕಚೇರಿಯ ಐಡಿ ಕಾರ್ಡ್‌ ತೋರಿಸಿ ಪ್ರಯಾಣ ಮಾಡಬಹುದು.
    * ಹೋಟೆಲ್‌ಗಳು ಬಂದ್‌ ಇದ್ದರೂ ಕೇವಲ ಪಾರ್ಸಲ್‌ಗೆ ಅವಕಾಶ ಕಲ್ಪಿಸಲಾಗಿದೆ.
    * ಬಾರ್​-ವೈನ್​ ಶಾಪ್​ ಕ್ಲೋಸ್‌. ಆದರೆ ಮದ್ಯದಂಗಡಿಗಳು ಓಪನ್ ಪಾರ್ಸೆಲ್‍ಗೆ ಮಾತ್ರ ಅವಕಾಶ (ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಅವಕಾಶ ಕಲ್ಪಿಸಲಾಗಿದೆ)
    * ಈಗಾಗಲೇ ವಿಮಾನ ಅಥವಾ ರೈಲು ಟಿಕೆಟನ್ನು ಮುಂಗಡವಾಗಿ ಬುಕ್ ಮಾಡಿದ್ದರೆ ಆ ಟಿಕೆಟ್ ತೋರಿಸಿ ಪ್ರಯಾಣಿಕರು ಪ್ರಯಾಣ ಮಾಡಬಹುದು, ಆದರೆ ಇನ್ನುಮುಂದೆ ಟಿಕೆಟ್ ಬುಕ್ಕಿಂಗ್ ಅವಕಾಶ ಇಲ್ಲ.
    * ಬ್ಯಾಂಕ್​, ಎಟಿಎಂ, ಪೆಟ್ರೋಲ್​ ಪಂಪ್​ ಕಾರ್ಯ ನಿರ್ವಹಿಸಲಿವೆ.
    * ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಆಟೋ, ಕ್ಯಾಬ್ ಬಳಕೆಗೆ ಅವಕಾಶ
    * ಸಾಮಾನ್ಯವಾಗಿ ಇರುವಂತೆ ತುರ್ತು ಸೇವೆಗಳಾದ ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಹೋಂ ಗಾರ್ಡ್, ಸಿವಿಲ್ ಡಿಫೆನ್ಸ್, ಅಗ್ನಿ ಶಾಮಕ, ತುರ್ತು ಸೇವೆಗಳು ಕಾರ್ಯ ನಿರ್ವಹಿಸಲಿವೆ.
    * ಔಷಧಿ, ತರಕಾರಿ, ಹಣ್ಣು, ದಿನ ಪತ್ರಿಕೆ, ಆನ್‍ಲೈನ್ ಫುಡ್, ಮಾಂಸದಂಗಡಿ ತೆರೆದಿರುತ್ತವೆ.
    * ಪಡಿತರ ಅಂಗಡಿಗಳು, ದಿನಸಿ ಅಂಗಡಿಗಳು ಓಪನ್‌ ಇರಲಿವೆ.
    * ಬಿಬಿಎಂಪಿ ಮತ್ತು ಕಾರಾಗೃಹ ಇಲಾಖೆ ಕಾರ್ಯ ನಿರ್ವಹಿಸಲಿದ್ದು, ಇತರ ಸರ್ಕಾರಿ ಕಚೇರಿಗಳೂ ಕೆಲಸ ಮಾಡಲಿವೆ.
    * ಎಲ್ಲಾ ರೀತಿಯ ಕೃಷಿ ಚಟುವಟಿಕೆಗೆ ಅವಕಾಶವಿದೆ. ಇದರಲ್ಲಿ ಕೃಷಿ ಏಜೆನ್ಸಿ, ರಸಗೊಬ್ಬರ ಮಾರುಕಟ್ಟೆ, ಕೃಷಿ ಗೊಬ್ಬರ, ಹಣ್ಣು ತರಕಾರಿ ಮಾರುಕಟ್ಟೆಗೆ ಅವಕಾಶವಿದ್ದು, ಮೀನುಗಾರಿಕೆ ಹಾಗೂ ಪಶುಸಂಗೋಪನೆ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ.
    * ಸರಕು ಸಾಗಾಟದ ವಾಹನಗಳು ಓಡಾಟ ನಡೆಸಲಿವೆ.

    ಏನು ಇರಲ್ಲ?
    * ರಾಜಕೀಯ, ಧಾರ್ಮಿಕ, ಮದುವೆ, ಸಮಾರಂಭಗಳಿಗೆ ಅವಕಾಶವಿಲ್ಲ
    * ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ ಸಂಚಾರ ಸಂಪೂರ್ಣವಾಗಿ ಬಂದ್​
    * ಬೈಕ್, ಕಾರು ಸಂಚಾರ ಇಲ್ಲ
    * ಮಾಲ್​, ಶಾಪಿಂಗ್​ ಮಾಲ್​​ ತೆರೆಯಲ್ಲ
    *ಮೊಬೈಲ್ ಶಾಪ್, ಎಲೆಕ್ಟ್ರಿಲ್ ಶಾಪ್ ತೆರೆಯುವಂತಿಲ್ಲ
    * ವಾಣಿಜ್ಯ, ಖಾಸಗಿ ಸಂಸ್ಥೆ ಸಂಪೂರ್ಣವಾಗಿ ಮುಚ್ಚಲಿವೆ.
    * ಹೊಸ ವಿಮಾನ, ರೈಲು ಸಂಚಾರಕ್ಕೆ ಅವಕಾಶ ನೀಡಿಲ್ಲ.
    * ಶಾಲೆ- ಕಾಲೇಜ್​, ಶಿಕ್ಷಣ/ಕೋಚಿಂಗ್​ ಸಂಸ್ಥೆಗಳು ಬಂದ್​
    * ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ.
    * ಸಿನಿಮಾ ಮಂದಿರ, ಜಿಮ್​, ಸ್ಟೇಡಿಯಂಗಳು, ಮನರಂಜನಾ ಉದ್ಯಾನ , ರಂಗಮಂದಿರ, ಧಾರ್ಮಿಕ ಸ್ಥಳಗಳು ಬಂದ್​ ಆಗಲಿವೆ.

    ಕರೊನಾ ಭಯಬೇಡ, ಎಚ್ಚರಿಕೆ ಇರಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts