More

    ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ ತುಂಡು ಗುತ್ತಿಗೆ, ಲಾಕ್‌ಡೌನ್‌ದಿಂದ ವಿಳಂಬ

    ವೀರಾಪುರ ಕೃಷ್ಣ ಗಂಗಾವತಿ

    ನಗರದಲ್ಲಿ ಎರಡು ವರ್ಷಗಳಿಂದ ಕೈಗೊಂಡಿರುವ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ಆರ್ಧಕ್ಕೆ ನಿಂತಿವೆ. ಕರೊನಾ ಕಾರಣದಿಂದಾಗಿ ಗುತ್ತಿಗೆದಾರರು ಕಾಮಗಾರಿ ನಿರ್ವಹಣೆಗೆ ಆಸಕ್ತಿ ವಹಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

    ನಗರಸಭೆ ಆಡಳಿತ ಕಚೇರಿ, ಚರಂಡಿ, ಪಾದಚಾರಿ ಮಾರ್ಗ, ರಸ್ತೆಗಳು, ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಹಣೆ, ಪಾರ್ಕಿಂಗ್, ಉದ್ಯಾನ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅಂದಾಜು 25 ಕೋಟಿ ರೂ. ಅನುದಾನ ಮಂಜೂರಾಗಿದೆ. ಗುತ್ತಿಗೆದಾರರಲ್ಲಿ ಕಾಮಗಾರಿ ಆರಂಭದಲ್ಲಿದ್ದ ಆಸಕ್ತಿ ಪೂರ್ಣಗೊಳಿಸಲು ಇಲ್ಲ. ತುಂಡು ಗುತ್ತಿಗೆ ನೀಡಿದ್ದೇ ವಿಳಂಬಕ್ಕೆ ಕಾರಣವಾಗಿದ್ದು, ಗುಣಮಟ್ಟದಲ್ಲೂ ಲೋಪದೋಷಗಳು ಕಂಡುಬಂದಿವೆ.

    ಅಮೃತ ಸಿಟಿ ಯೋಜನೆಯಡಿ ದುರ್ಗಮ್ಮನಹಳ್ಳ ತಡೆಗೋಡೆಗೆ 10 ಕೋಟಿ ರೂ., ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸ್ಥಳ ನಿರ್ಮಾಣಕ್ಕೆ 2.14, ಪಾದಚಾರಿ ಮಾರ್ಗಕ್ಕೆ 1.36 ಕೋಟಿ ರೂ., ುಟ್ ಒವರ್ ಬ್ರಿಡ್ಜ್‌ಗೆ 70 ಲಕ್ಷ ರೂ., ನಗರೋತ್ಥಾನ ಯೋಜನೆಯಡಿ ಆಡಳಿತ ಕಚೇರಿಗೆ 3 ಕೋಟಿ ರೂ., 15ನೇ ಹಣಕಾಸು ಯೋಜನೆಯಡಿ ರಸ್ತೆಗಳ ಅಭಿವೃದ್ಧಿಗೆ 26 ಲಕ್ಷ ರೂ., ನೀರು ಸಂಗ್ರಹ ತೊಟ್ಟಿ ನಿರ್ಮಾಣಕ್ಕೆ 25 ಲಕ್ಷ ರೂ., ಉದ್ಯಾನಗಳ ಅಭಿವೃದ್ಧಿಗೆ 50 ಲಕ್ಷ ರೂ., ಚರಂಡಿ ನಿರ್ಮಾಣಕ್ಕೆ 40 ಲಕ್ಷರೂ., ಮಂಜೂರಾಗಿದೆ. 14ನೇ ಹಣಕಾಸು ಯೋಜನೆಯಡಿ ವಿವಿಧ ವಾರ್ಡ್‌ಗಳಲ್ಲಿ ಮೂಲ ಸೌಕರ್ಯಕ್ಕಾಗಿ 60 ಲಕ್ಷ ರೂ., ಎಸ್‌ಎ್ಸಿ ಯೋಜನೆಯಡಿ ಚರಂಡಿ, ರಸ್ತೆ ಮತ್ತು ಕುಡಿವ ನೀರಿಗಾಗಿ 60 ಲಕ್ಷ ರೂ. ಅನುದಾನವಿದ್ದು, ಎಲ್ಲ ಕಾಮಗಾರಿಗಳು ಶುರುವಾಗಿವೆ.

    ಆನ್‌ಲೈನ್ ಟೆಂಡರ್‌ನಲ್ಲಿ ಗುತ್ತಿಗೆ ಪಡೆದಿರುವ ಪ್ರಭಾವಿ ಗುತ್ತಿಗೆದಾರರು ಸ್ಥಳೀಯ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ತುಂಡು ಗುತ್ತಿಗೆ ನೀಡುತ್ತಿದ್ದಾರೆ. ತುಂಡು ಗುತ್ತಿಗೆದಾರರು ಅರೆಬರೆ ಕಾಮಗಾರಿ ನಿರ್ವಹಿಸಿ, ಬಿಲ್‌ಗಾಗಿ ಲಾಬಿ ನಡೆಸುತ್ತಿರುವುದು ಸಂಬಂಧಪಟ್ಟ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ನಗರಸಭೆ ಆಡಳಿತ ಕಚೇರಿ ಕಟ್ಟಡ ಕಾಮಗಾರಿ ಅವಧಿ ಪೂರ್ಣಗೊಂಡು ಒಂದೂವರೆ ವರ್ಷವಾಗಿದ್ದು, ಗುತ್ತಿಗೆದಾರರಿಗೆ ಮೂರು ನೋಟೀಸ್ ನೀಡಲಾಗಿದೆ.

    ದರ ಅಧಿಕವಾಗಿದ್ದೂ ಕಾರಣ
    ಎರಡು ವರ್ಷದ ಹಿಂದಿನ ದರಪಟ್ಟಿ ಆಧಾರದಡಿ ಗುತ್ತಿಗೆ ಪಡೆದವರು ಪ್ರಸ್ತುತ ಸಾಮಗ್ರಿಗಳ ದರ ಹೆಚ್ಚಳದಿಂದ ಕಾಮಗಾರಿ ನಿರ್ವಹಣೆಗೆ ಆಸಕ್ತಿ ವಹಿಸುತ್ತಿಲ್ಲ. ಕಾಮಗಾರಿ ವಿಳಂಬಕ್ಕೆ ಕಾರಣರಾದವರ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ. ದಂಡ ವಸೂಲಿಯೊಂದಿಗೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ನಿರ್ಧರಿಸಿದೆ.

    ವಿವಿಧ ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ ಇಂಜಿನಿಯರ್‌ಗಳ ಸಭೆ ಕರೆದು ಮಾಹಿತಿ ಪಡೆಯಲಾಗಿದೆ. ಗುತ್ತಿಗೆದಾರರಿಂದ ಲೋಪವಾಗು ತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು.
    | ಎಸ್.ವಿಕಾಸ್ ಕಿಶೋರ್ ಜಿಲ್ಲಾಧಿಕಾರಿ

    ಕಾಮಗಾರಿ ವಿಳಂಬಕ್ಕೆ ಕಾರಣರಾದ ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಿದ್ದು, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕ್ರಮಕ್ಕಾಗಿ ಜಿಲ್ಲಾಡಳಿತಕ್ಕೆ ಶಿಾರಸು ಮಾಡಲಾಗಿದೆ.
    | ಅರವಿಂದ ಜಮಖಂಡಿ ಗಂಗಾವತಿ ನಗರಸಭೆ ಪೌರಾಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts