More

    ಕರೊನಾ ಭೀತಿ ಮರೆತು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ ಅವಳಿ ನಗರದ ಜನ

    ರಬಕವಿ/ಬನಹಟ್ಟಿ : ಜೂ.14 ರಿಂದ ಲಾಕ್‌ಡೌನ್‌ನ್ನು ಸರ್ಕಾರ ಕೊಂಚ ಸಡಿಲಗೊಳಿಸಿದೆ. ಆದರೆ, ಜನ ಕರೊನಾ ಭೀತಿ ಮರೆತು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ.

    ಮಂಗಳವಾರ ಬನಹಟ್ಟಿಯಲ್ಲಿ ಸಂತೆ ದಿನವಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮ ಬದುಕಲ್ಲಿ ಸಂತೆ, ಕಾಯಿಪಲ್ಲೆ ಸಿಗುತ್ತದೆಯೋ ಇಲ್ಲವೋ ಎಂಬಂತೆ ಜಾತ್ರೆಯಲ್ಲಿ ಸೇರಿದಂತೆ ಸೇರಿದ್ದರು.ಪೊಲೀಸರು ಎದುರಲ್ಲೇ ಇದ್ದರೂ ಅಸಹಾಯಕರಂತೆ ನಿಲ್ಲಬೇಕಾಯಿತು.

    ಮಂಗಳವಾರ ತೇರದಾಳ ಪೊಲೀಸ್ ಠಾಣೆಗೆ ಎಸ್ಪಿ ಭೇಟಿ ಇದ್ದಕಾರಣ ಬಂದೋಬಸ್ತ್‌ಗೆ ಸ್ವಲ್ಪಜನ ಪೊಲೀಸ್ ಸಿಬ್ಬಂದಿ ಹೋಗಿದ್ದನ್ನೆ ಜನ ಬಂಡವಾಳ ಮಾಡಿಕೊಂಡು ಬೆಳಗ್ಗೆ 7ರಿಂದ 12 ರವರೆಗೆ ಜಾತ್ರೆಯಲ್ಲಿ ಸೇರಿದಂತೆ ಜನ ಸೇರಿ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.

    ಅವಳಿ ನಗರಗಳಲ್ಲಿ ಈಗ ಕೊಂಚ ಕರೊನಾ ಸೋಂಕಿತ ಸಂಖ್ಯೆ ಕಡಿಮೆಯಾಗಿದೆ. ಆದರೆ ಜನರು ಜಾಗೃತರಾಗಬೇಕು. ಕೆಲವರಂತೂ ಮಾಸ್ಕ್ ಹಾಕಿಕೊಳ್ಳುತ್ತಿಲ್ಲ, ಸಮಾಜಿಕ ಅಂತರವಂತೂ ಕಾಪಾಡುವುದೇ ಇಲ್ಲ. ಮಾರ್ಕೆಟ್, ಬ್ಯಾಂಕ್‌ಗಳ ಎದುರು ಜನ ಜಂಗುಳಿ ಕಂಡು ಬರುತ್ತಿದೆ.

    ಜನ ಮತ್ತೆ ಮೈಮರೆತರೆ ವೈರಸ್ ಹರಡುವ ಸಾಧ್ಯತೆಗಳಿವೆ. ಸರ್ಕಾರ ಎಷ್ಟು ಹಣ ಕೊಟ್ಟರೇನು? ಜೀವ ಹೋದಮೇಲೆ ಆ ಹಣದಿಂದ ಜೀವ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಜನರು ಜಾಗೃತರಾಗಿ ಸರ್ಕಾರದ ನಿಯಮಗಳನ್ನು ಪಾಲಿಸಿ ಕರೊನಾ ಹೊಡೆದೋಡಿಸಬೇಕಿದೆ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts