More

    60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

    ರಬಕವಿ/ಬನಹಟ್ಟಿ: ಸ್ವಾತಂತ್ರಾೃ ನಂತರದ ದಿನಗಳಲ್ಲಿ 60 ವರ್ಷಗಳವರೆಗೆ ದೇಶವನ್ನಾಳಿದ ಕಾಂಗ್ರೆಸ್ ಅವನತಿಯತ್ತ ಸಾಗಿದೆ. ಇದೀಗ 276 ಸ್ಥಾನಗಳಷ್ಟೂ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಕೇವಲ 217 ಕ್ಷೇತ್ರಗಳಿಗೆ ಸೀಮಿತಗೊಂಡಿದೆ. ಇಂತಹ ಪಕ್ಷದಿಂದ ಪ್ರಧಾನಿಯಾಗವರೇ? ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

    ಬನಹಟ್ಟಿಯ ಈಶ್ವರಲಿಂಗ ಮೆದಾನದಲ್ಲಿ ಸಾವಿರಾರು ಮಹಿಳೆಯರು ಬೃಹತ್ ರ‌್ಯಾಲಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಚಾರ ಸಭೆಯಲ್ಲಿ ಅವರು ಮಾತನಾಡಿದರು.

    ಪ್ರಧಾನಿ ಹುದ್ದೆಗೆ ಒಂದೆಡೆ ಸ್ಟಾಲಿನ್, ಮಮತಾ ಬ್ಯಾನರ್ಜಿಯಂತವರು ಬೆನ್ನು ಬಿದ್ದಿದ್ದರೆ, ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ನಾನೂ ಪ್ರಧಾನಿಯಾಗುವೆ ಎಂದು ಹೊರಟಿದ್ದಾರೆ. ರಾಜ್ಯಭಾರವನ್ನೇ ನೀಗಿಸದ ಇಂಥವರಿಂದ ದೇಶಭಾರ ಸಾಧ್ಯವೇ? ಎಂದರು. ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ರಾಜಕೀಯ ನಡೆಸುತ್ತಿದ್ದಾರೆ ವಿನಃ ಅಭಿವೃದ್ಧಿ ಶೂನ್ಯವಾಗಿದೆ ಎಂದರು.

    ದೇಶದ ರಕ್ಷಣೆ, ಸುರಕ್ಷತೆಗಾಗಿ ಮೋದಿಯನ್ನು ಪ್ರಧಾನಿಯನ್ನಾಗಿಸಬೇಕಿದೆ. ಬಡವರ ಪರ ಹಾಗೂ ದೇಶದ ಅಭಿವೃದ್ಧಿ 10 ವರ್ಷಗಳಿಂದ ನಡೆಯುತ್ತಿದೆ. ಮುಂದೆಯೂ ಸುಭದ್ರ ಸರ್ಕಾರಕ್ಕೆ ಬಿಜೆಪಿ ಅನಿವಾರ್ಯವಾಗಿದೆ ಎಂದರು.

    ಮತಾಂತರ ಒಪ್ಪದಕ್ಕೆ ಕೊಲೆ: ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಪ್ರಕರಣ ಕ್ಷೀಣಿಸಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ. ಮುಸ್ಲಿಂ ಯುವಕ ಕೊಲೆಯಾದ ನೇಹಾಳನ್ನು ಮುಸ್ಲಿಂ ಮತಾಂತರಕ್ಕೆ ಒತ್ತಾಯಿಸಿದ್ದಾನೆ. ಇದಕ್ಕೆ ಸುತಾರಾಂ ಒಪ್ಪದ ಕಾರಣ ಕೊಲೆ ಮಾಡುವಷ್ಟು ಕ್ರೂರಿಯಾದ ಆತನ ರಕ್ಷಣೆಗೆ ರಾಜ್ಯ ಸರ್ಕಾರ ನಿಂತಿರುವುದು ತಲೆ ತಗ್ಗಿಸುವ ವಿಚಾರ ಎಂದು ಸಂಸದೆ ಶೋಭಾ ಆರೋಪಿಸಿದರು.

    ಶಾಸಕ ಸಿದ್ದು ಸವದಿ ಮಾತನಾಡಿ, ಗ್ಯಾರಂಟಿ ಹೆಸರಲ್ಲಿ ಖಜಾನೆ ಲೂಟಿಯಾಗ್ತಿದೆ. ಅಭಿವೃದ್ಧಿ ಹಣ ದುರ್ಬಳಕೆ ಮಾಡಿಕೊಂಡು ಪಂಚ ಗ್ಯಾರಂಟಿ ಹೆಸರಲ್ಲಿ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದರು.

    ಒಂದು ಲಕ್ಷ ನೀಡಿದರೆ ಮನೆಯಾಳಾಗುವೆ: ಲೋಕಸಭಾ ಪ್ರಣಾಳಿಕೆಯಲ್ಲಿ ಬೋಗಸ್ ಗ್ಯಾರಂಟಿ ಹೇಳಿರುವ ಕಾಂಗ್ರೆಸ್ ಮೊದಲಿಗೆ ಆಡಳಿತಕ್ಕೆ ಬರುವುದಿಲ್ಲ. ಇವರೇನಾದರೂ ಪ್ರತಿ ವರ್ಷ ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ರೂಗಳನ್ನು ನೀಡಿದ್ದಲ್ಲಿ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಅವರ ಮನೆಯಾಳಾಗಿ ಕೆಲಸ ಮಾಡುವೆ ಎಂದು ಸವಾಲೆಸೆದರು.

    60 ಲಕ್ಷ ಮಹಿಳೆಯರಿರುವ ದೇಶದಲ್ಲಿ ವರ್ಷಕ್ಕೆ 60 ಲಕ್ಷ ಕೋಟಿ ರೂಗಳಷ್ಟು ಹಣ ಕೇವಲ ಮಹಿಳಾ ಗ್ಯಾರಂಟಿಗೆ ಬೇಕು. ಪ್ರತಿ ವರ್ಷ ಇಡೀ ಕೇಂದ್ರದ ವಾರ್ಷಿಕ ಬಜೆಟ್ 45 ಲಕ್ಷ ಕೋಟಿ ರೂಗಳಷ್ಟಿದೆ. ಹೀಗಿರುವಾಗ ಹಣ ಹೊಂದಿಸುವ ವಿಚಾರವೇ ಇಲ್ಲದೆ ಬೋಗಸ್ ಗ್ಯಾರಂಟಿಗಳಿಗೆ ಮರುಳಾಗಬೇಡಿ ಎಂದು ಮನವಿ ಮಾಡಿದರು.

    ಅಂದಾಜು ಒಂದೂವರೆ ಕಿಮೀನಷ್ಟು ಉದ್ದನೆಯ ರಸ್ತೆಯಷ್ಟು ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಬೃಹತ್ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದು ದಾಖಲೆಯಾಗಿತ್ತು.

    ಸವಿತಾ ಹೊಸೂರ, ವೈಷ್ಣವಿ ಬಾಗೇವಾಡಿ, ಪವಿತ್ರಾ ತುಕ್ಕಣ್ಣವರ, ರತ್ನಾ ಕೊಳಕಿ, ಮಾಲಾ ಬಾವಲತ್ತಿ, ಶಾಂತಾ ಸೊರಗಾಂವಿ, ಗೌರಿ ಮಿಳ್ಳಿ, ಮೀನಾಕ್ಷಿ ಹಿರೇಮಠ, ದುರ್ಗವ್ವ ಹರಿಜನ, ಸಾವಿತ್ರಿ ಆಸಂಗಿ, ಶ್ರೀಶೈಲ ಬೀಳಗಿ, ಧರೆಪ್ಪ ಉಳ್ಳಾಗಡ್ಡಿ, ಪ್ರಭು ಮೊಳೇದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts