More

    ಬೇಸಿಗೆಯಲ್ಲಿ ಕಾಟನ್ ಬಟ್ಟೆಯನ್ನೇ ಧರಿಸಿ

    ರಬಕವಿ/ಬನಹಟ್ಟಿ: ಈ ಭಾಗದಲ್ಲಿ 42 ಡಿಗ್ರಿವರೆಗೂ ಬಿಸಿಲಿನ ತಾಪ ಹೆಚ್ಚಾಗಿದ್ದು, ಜನತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಅವಳಿ ನಗರದ ಸ್ಲಂ ಏರಿಯಾಗಳು ಸೇರಿ ವಿವಿಧೆಡೆ 14ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಓಆರ್‌ಎಸ್ ಹಾಗೂ ದೇಹ ತಂಪುಗೊಳಿಸುವ ಪದಾರ್ಥಗಳನ್ನು ಜನತೆಗೆ ನೀಡುತ್ತಿದ್ದಾರೆ ಎಂದು ಕಿರಿಯ ಆರೋಗ್ಯ ಸಹಾಯಕಿ ಅನು ಬಡಿಗೇರ, ಸಾವಿತ್ರಿ ಪವಾಡಶೆಟ್ಟಿ ತಿಳಿಸಿದರು.

    ಬಿಸಿಲಿನಿಂದ ಏನಾದರೂ ತೊಂದರೆಯಾದರೆ ಶುಲ್ಕ ರಹಿತ ಸಹಾಯವಾಣಿ ಸಂಖ್ಯೆ 1077ಕ್ಕೆ ಕರೆ ಮಾಡಲು ತಿಳಿಸಿದರು.

    ರಬಕವಿ ನಗರದ ಸ್ಲಂ ಏರಿಯಾಗಳಲ್ಲಿ ಸೋಮವಾರ ಬಿಸಿಲಿನಿಂದಾಗುವ ಹಾನಿ ಮತ್ತು ಅದರಿಂದ ಹೇಗೆ ರಕ್ಷಿಸಿಕೊಳ್ಳಬೇಕೆಂದು ಜನಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕಾಟನ್ ಬಟ್ಟೆಯನ್ನೇ ಧರಿಸಬೇಕು. ರಸ್ತೆ ಬದಿ ಕತ್ತರಿಸಿ ಇಟ್ಟ ಹಣ್ಣು ಅಥವಾ ಆಹಾರಗಳನ್ನು ತಿನ್ನಬಾರದು. ನಿಮ್ಮ ದೇಹದ ತೂಕ 20 ಕೇಜಿಗೆ ಒಂದು ಲೀಟರ್‌ನಂತೆ ಗಂಟೆಗೆ ಒಂದು ಲೋಟದ ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂದರು.

    ಆಶಾ ಕಾರ್ಯಕರ್ತೆ ಬೇಬಿಶ್ರೀ ಹಾಸಿಲಕರ ಮಾತನಾಡಿ, ಬಿಸಿಲಿನ ತಾಪಕ್ಕೆ ವಯೋವೃದ್ಧರಿಗೆ ತುಂಬ ತೊಂದರೆಯಾಗುವ ಸಾಧ್ಯತೆ ಇದೆ. ಅವರನ್ನು ತಂಪಾದ ಸ್ಥಳಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು. ನಿಂಬೆ ರಸ, ಓಆರ್‌ಎಸ್ ಕುಡಿಸಬೇಕು ಎಂದು ತಿಳಿಸಿದರು.

    ಸಾವಿತ್ರಿ ಪವಾಡಶೆಟ್ಟಿ, ಲಕ್ಷ್ಮೀ ತಳವಾರ, ಭಾರತಿ ಸಿರಗೂರ, ಶೋಭಾ ಗುಣಕಿ, ಸಕ್ಕೂಬಾಯಿ ಪೂಜಾರಿ, ಸವಿತಾ ಬಾವಲತ್ತಿ, ಸವಿತಾ ಔರಸಂಗ, ಶಿವಲೀಲಾ ಪಾಟೀಲ, ಕವಿತಾ ಆಲಗೂರ, ಯಲ್ಲವ್ವ ಉಂಕಿ, ಲಕ್ಷ್ಮೀ ಹಳ್ಳಿ, ಪೂಜಾ ಅಡವಿತೋಟ, ಗೀತಾ ಆರಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts