More

    ಮಾವಿನ ಹಣ್ಣು ಸಂಗ್ರಹಣಾ ಅಧಿಕಾರಿಗಳು ಭೇಟಿ

    ರಬಕವಿ/ಬನಹಟ್ಟಿ: ಮಾವಿನ ಹಣ್ಣುಗಳನ್ನು ಕೃತಕವಾಗಿ ಹಣ್ಣು ಮಾಡಿ ಮಾರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳವಾರ ರಬಕವಿ-ಬನಹಟ್ಟಿ ನಗರಸಭೆ ಆರೋಗ್ಯ ನಿರೀಕ್ಷಕ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಆಹಾರ ಸಂರಕ್ಷಣಾಧಿಕಾರಿಗಳ ತಂಡ ಮಾವಿನ ಹಣ್ಣು ಸಂಗ್ರಹಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿತು.

    ಬಳಿಕ ಮಾತನಾಡಿದ ಸಮುದಾಯ ಆರೋಗ್ಯ ಕೇಂದ್ರದ ಆಹಾರ ಸಂರಕ್ಷಣಾ ಅಧಿಕಾರಿ ಅಪ್ಪಾಜಿ ಹೂಗಾರ, ಜನರ ಆರೋಗ್ಯದ ಹಿತದೃಷ್ಠಿಯಿಂದ ಹಣ್ಣು ಮಾರಾಟಗಾರರು ಸರಿಯಾದ ರೀತಿಯಿಂದ ಹಣ್ಣು ಮಾರುತ್ತಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಲಾಯಿತು. ಕೊಳೆತ ಹಣ್ಣು ಹಾಗೂ ಬೇಗನೆ ಹಣ್ಣು ಮಾಡುವ ಕ್ರಿಯೆ ಮಾಡಿ ಮಾರಿದರೆ ಅಂತವರ ಮೇಲೆ ಸರ್ಕಾರದ ನಿಯಮದಂತೆ ಕ್ರಮ ಜರುಗಿಸಲಾಗುವುದು. ಅಲ್ಲದೆ, ಕೆಲವೊಂದು ಕಡೆ ದಿನಾಂಕ ಮುಗಿದ ಆಹಾರ ಪದಾರ್ಥಗಳನ್ನು ಮಾರುತ್ತಿರುವುದು ಕಂಡು ಬಂದಿದ್ದು, ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.

    ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ್ಷಿ ಶೋಭಾ ಹೊಸಮನಿ, ಕಿರಿಯ ನಿರೀಕ್ಷಕರಾದ ಸಂಗೀತಾ ಕೋಳಿ, ಸಮುದಾಯ ಆರೋಗ್ಯ ಕೇಂದ್ರದ ಗಂಗಾಧರ ಗೊಬ್ಬಾಣಿ, ರಾಜು ಗಸ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts