ಆರೋಗ್ಯದ ಕುರಿತು ಆತಂಕ, ವೈದ್ಯರ ನಿಗಾದಲ್ಲಿ ರಾಣಿ ಎಲಿಜಬೆತ್​ II..

Queen Elizabeth II
Published on

ಲಂಡನ್​: ಬಕಿಂಗ್​​ಹ್ಯಾಮ್ ಅರಮನೆಯ ರಾಣಿ ಎಲಿಜಬೆತ್ II ಆರೋಗ್ಯ ಪರಿಸ್ಥಿತಿಯ ಕುರಿತು ಆತಂಕ ವ್ಯಕ್ತವಾಗಿದ್ದು, ಆಕೆಯ ದೈಹಿಕ ಪರಿಸ್ಥಿತಿ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ.

96 ವರ್ಷದ ರಾಣಿ ಕಳೆದ ಅಕ್ಟೋಬರ್​ನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದು, ನಡೆಯಲು ಹಾಗೂ ನಿಲ್ಲಲೂ ಆಗದ ಪರಿಸ್ಥಿತಿ ತಲುಪಿದ್ದಾರೆ. ಬುಧವಾರ ರಾಜಕೀಯ ಸಲಹೆಗಾರರ ಜತೆ ಮೀಟಿಂಗ್ ಇದ್ದಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಅವರು ಅದರಲ್ಲಿ ಭಾಗಿ ಆಗಿರಲಿಲ್ಲ.

ಇಂದು ಬೆಳಗ್ಗೆ ದೈಹಿಕ ಪರಿಸ್ಥಿತಿ ತಪಾಸಣೆ ನಡೆಸಿದ ವೈದ್ಯರು, ವೈದ್ಯರ ನಿಗಾದಲ್ಲಿ ಇರುವುದು ಸೂಕ್ತ ಎಂದು ಸಲಹೆ ನೀಡಿದ್ದರಿಂದ ರಾಣಿ ವಿಶೇಷ ಆರೈಕೆಯಲ್ಲಿದ್ದಾರೆ ಎಂದು ಅರಮನೆ ಮೂಲಗಳು ತಿಳಿಸಿವೆ. ಪ್ರಿನ್ಸ್ ಚಾರ್ಲ್ಸ್​ ಮತ್ತು ಅವರ ಹಿರಿಯ ಪುತ್ರ ಪ್ರಿನ್ಸ್ ವಿಲಿಯಮ್ ಸ್ಕಾಟ್ಲೆಂಡ್ ಕಡೆಗೆ ಹೊರಟಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net