FACT-CHECK|ಕ್ವಾರಂಟೈನ್​ ನಿಯಮ ಬದಲಾವಣೆ ಆಗಿದ್ಯಾ?

Sudhakar 10 March 20
Published on

ಬೆಂಗಳೂರು: ಕ್ವಾರಂಟೈನ್​ ನಿಯಮದಲ್ಲಿ ಮತ್ತೆ ಬದಲಾವಣೆ ಮಾಡಿ ಸರ್ಕಾರ ಹೊಸ ಆದೇಶ ಹೊರಡಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಆದರೆ, ಇದು ಸುಳ್ಳು ಎಂದು ಫ್ಯಾಕ್ಟ್ ಚೆಕ್​ನಲ್ಲಿ ಗೊತ್ತಾಗಿದ್ದು, ಹಳೇ ನಿಯಮವೇ ಜಾರಿಯಲ್ಲಿದೆ.

ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನ ಕ್ವಾರಂಟೈನ್​ ಕಡ್ಡಾಯ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್​ ಟ್ವಿಟರ್ ನಲ್ಲಿ ಹಾಕಿದ್ದಾರೆ ಎಂಬ ಸುದ್ದಿ ಇಂದು ಬೆಳಗ್ಗೆಯಿಂದ ಹರಿದಾಡಿತ್ತು. ಆದರೆ ಹೊಸ ನಿಯಮ ಜಾರಿ ಆಗಿಲ್ಲ ಎಂದು ಸಚಿವರು ಮತ್ತೆ ಟ್ವೀಟ್​ ಮಾಡಿದ್ದಾರೆ. ಇದನ್ನೂ ಓದಿರಿ video/ ಕರೊನಾ ವಾರ್ಡಿನಲ್ಲಿ ‘ನರಕ’ ದರ್ಶನ, ಶೌಚಗೃಹದ ನೀರನ್ನೇ ಕುಡಿದ ಸೋಂಕಿತರು!

ಇತ್ತೀಚೆಗೆ ಕ್ವಾರಂಟೈನ್​ ನಿಯಮ ಸಡಿಲಗೊಳಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಹಾರಾಷ್ಟ್ರದಿಂದ ಬರುವವರಿಗೆ ಮಾತ್ರ 7 ದಿನ ಸಾಂಸ್ಥಿಕ ಕ್ವಾರಂಟೈನ್​ ಮತ್ತು 7 ದಿನ ಹೋಂ ಕ್ವಾರಂಟೈನ್​ಗೆ ಸೂಚಿಸಿತ್ತು. ದೆಹಲಿ ಮತ್ತು ಗುಜರಾತ್​ ರಾಜ್ಯದಿಂದ ಬಂದವರಿಗೆ 3ದಿನ ಸಾಂಸ್ಥಿಕ ಕ್ವಾರಂಟೈನ್​, 11 ದಿನ ಹೋಂ ಕ್ವಾರಂಟೈನ್​ ಎಂದು ಹೇಳಿತ್ತು. ಸದ್ಯ ಇದೇ ನಿಯಮ ಜಾರಿಯಲ್ಲಿದೆ.

ಇದನ್ನೂ ಓದಿರಿ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net