ಕ್ವಾರಂಟೈನ್​ನಲ್ಲಿದ್ದ ನಿರಾಶ್ರಿತ ವೃದ್ಧ ಮೃತಪಡುವ ಮುನ್ನ ವಾರ್ಡನ್​ಗೆ ಹೇಳಿದ್ದು ಏನು?

Kundagol Home Quarantine 26 MAR 20
Published on

ಬೆಂಗಳೂರು: ಜನ್ಮ ದಿನದಂದೇ ನಿರಾಶ್ರಿತರ ಕೇಂದ್ರದಲ್ಲಿ ಕ್ವಾರಂಟೈನ್​ನಲ್ಲಿದ್ದ 68 ವರ್ಷದ ವೃದ್ಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಗಾಯತ್ರಿ ನಗರದಲ್ಲಿದ್ದ ನಿರಾಶ್ರಿತ ವೃದ್ಧನನ್ನು ಕರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ವಿಜಯನಗರದ ನಿರಾಶ್ರಿತರ ಕೇಂದ್ರದಲ್ಲಿ ಕ್ವಾರಂಟೈನ್​ನಲ್ಲಿ ಇಡಲಾಗಿತ್ತು. ಇಂದು ವೃದ್ಧನ ಹುಟ್ಟಿದ ದಿನ. ಹೀಗಾಗಿ ಆತ ನಿರಾಶ್ರಿತ ಕೇಂದ್ರದ ವಾರ್ಡನ್​ಗೆ ಪೂರಿ ಮಾಡಿಸಿಕೊಡುವಂತೆ ಕೋರಿದ್ದರು. ಅಲ್ಲದೆ ಸಂಜೆ ಕೇಕ್​ ತರಿಸಿ ಕತ್ತರಿಸಿ ಎಲ್ಲರಿಗೂ ಹಂಚಬೇಕು ಎಂದು ಹೇಳಿದ್ದರು. ಇದಾದ 2 ತಾಸಿನಲ್ಲಿ ವೃದ್ಧ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.


ಅನಾಥವಾಗಿರುವ ಶವ: ನಿರಾಶ್ರಿತರ ಕ್ವಾರಂಟೈನ್​ ಕೇಂದ್ರದಲ್ಲಿ ಮೃತಪಟ್ಟಿರುವ ವೃದ್ಧನ ಶವ ಅನಾಥವಾಗಿ ಬಿದ್ದಿದೆ. ಸ್ಥಳಕ್ಕೆ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಬಂದಿಲ್ಲ ಎಂದು ತಿಳಿದು ಬಂದಿದೆ. ಕೇಂದ್ರದಲ್ಲಿ 40 ಮಂದಿ ನಿರಾಶ್ರಿತರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net