ಕ್ವಾರಂಟೈನ್​ ಉಲ್ಲಂಘಿಸಿ ಊರಿಗೆ ತೆರಳುತ್ತಿದ್ದ ಇಬ್ಬರನ್ನು ಪತ್ತೆ ಮಾಡಿ ಕ್ವಾರಂಟೈನ್​ಗೆ ಮರಳಿಸಿದ ಪೊಲೀಸರು

kwarntaine 30 mar 20
Published on

ವಿಜಯಪುರ: ಮನೆಯಲ್ಲಿ ಕ್ವಾರಂಟೈನ್​​ನಲ್ಲಿ ಇದ್ದ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಪೊಲೀಸರು ತಡೆದು ಮರಳಿ ಕ್ವಾರಂಟೈನ್​ಗೆ ಒಳಪಡಿಸಿರುವ ಘಟನೆ ನಡೆದಿದೆ.

ಕೋಲ್ಹಾರ ಪಟ್ಟಣದಲ್ಲಿ ಕ್ವಾರಂಟೈನ್​ನಲ್ಲಿ ಇದ್ದ ಇಬ್ಬರು ರಾತ್ರಿ ಕಾರಿನಲ್ಲಿ ತಮ್ಮ ಊರು ಶಿರಗುಪ್ಪಿಗೆ ತೆರಳುತ್ತಿದ್ದರು. ಚೆಕ್​ಪೋಸ್ಟ್​ ಬಳಿ ಪೊಲೀಸರು ಕಾರು ತಪಾಸಣೆ ನಡೆಸಿದರು. ಆ ವೇಳೆ ಅವರ ಕೈಯಲ್ಲಿ ಕ್ವಾರಂಟೈನ್​ನಲ್ಲಿ ಇರುವಂತೆ ಗುರುತು ಹಾಕಲಾಗಿತ್ತು, ಇದನ್ನು ಗಮನಿಸಿದ ಪೊಲೀಸರು ಇಬ್ಬರನ್ನು ಕೂಡಲೇ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದರು.

ಇಬ್ಬರು ಮಹಾರಾಷ್ಟ್ರದ ಖರಾಡದಲ್ಲಿ ಕೆಲಸ ಮಾಡುತ್ತಿದ್ದರು. ಮಾ.23ರಂದು ಕೋಲ್ಹಾರಕ್ಕೆ ಬಂದಿದ್ದರು. ಈ ವೇಳೆ ಇವರನ್ನು ತಪಾಸಣೆ ನಡೆಸಿ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಕ್ವಾರಂಟೈನ್​ ಉಲ್ಲಂಘಿಸಿ ಇವರು ಓಡಾಡುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಬ್ಬರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಬೇಕು. ಅಲ್ಲಿವರೆಗೆ ತೀವ್ರ ನಿಗಾ ಇರಿಸಬೇಕು ಎಂದು ಸಾರ್ವಜನಿಕರು ಪೊಲೀಸರನ್ನು ಒತ್ತಾಯಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net