

ಹೊಸನಗರ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಒಂದು ಹಂತ. ವಿದ್ಯಾರ್ಥಿಗಳ ಉದ್ಯೋಗ ಮತ್ತು ಬದುಕು ರೂಪಿಸುವಲ್ಲಿ ಕಾಲೇಜು ಶಿಕ್ಷಣ ಪರಿಣಾಮಕಾರಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 1 ಕೋಟಿ ರೂ. ವೆಚ್ಚದ ಹೆಚ್ಚುವರಿ ಕಟ್ಟಡಗಳಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಇಂದು ಸರ್ಕಾರಿ ಶಾಲಾ ಕಾಲೇಜುಗಳು ಖಾಸಗಿ ಸಂಸ್ಥೆಗಳಿಗಿಂತ ಉತ್ತಮ ಶಿಕ್ಷಣ ನೀಡುತ್ತಿವೆ. ಹಿಂದೆ ಸರ್ಕಾರಿ ಶಾಲಾ ಕಾಲೇಜು ಎಂದರೆ ಸಾರ್ವಜನಿಕರಲ್ಲಿ ಕೀಳರಿಮೆ ಇತ್ತು. ಇಂದು ಕಾಲ ಬದಲಾಗಿದೆ. ಜನರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದರು.
ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಂ.ಪಿ.ಸುರೇಶ್, ಪ್ರಾಚಾರ್ಯ ಸ್ವಾಮಿರಾವ್, ತಹಸೀಲ್ದಾರ್ ರಶ್ಮಿ ಹಾಲೇಶ್, ತಾಪಂ ಇಒ ನರೇಂದ್ರಕುಮಾರ್, ಬಸವರಾಜ್, ಕೃಷ್ಣಮೂರ್ತಿ, ಅಶ್ವಿನಿಕುಮಾರ್, ಗುಲಾಬಿ ಮರಿಯಪ್ಪ, ಗುರುರಾಜ, ಚಿದಂಬರ್, ಚಂದ್ರಮೌಳಿ, ಸ್ವಾಮಿ ನೇರ್ಲೆ ಇತರರಿದ್ದರು.