ಹೆಬ್ಬಾವು ಹಿಡಿದು ಸ್ಕಿಪ್ಪಿಂಗ್​ ಆಡಿದ ಮಕ್ಕಳು! ಭಾರೀ ಆಕ್ರೋಶಕ್ಕೆ ಕಾರಣವಾಯ್ತು ವೈರಲ್​ ವಿಡಿಯೋ... Python

Python
Published on

Python : ಸತ್ತ ಹೆಬ್ಬಾವನ್ನು ಹಗ್ಗದ ರೀತಿ ಬಳಸಿಕೊಂಡು ಕೆಲ ಮಕ್ಕಳು ಸ್ಕಿಪ್ಪಿಂಗ್ ಆಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಆಸ್ಟ್ರೇಲಿಯಾದ ವೂರಬಿಂದಾ ಪಟ್ಟಣಕ್ಕೆ ಸಂಬಂಧಿಸಿದ್ದು, ಭಾರೀ ಆಕ್ರೋಶಕ್ಕೆ ಗುರಿಯಾಗಿದೆ.

ವೈರಲ್​ ವಿಡಿಯೋದಲ್ಲಿ, ಇಬ್ಬರು ಮಕ್ಕಳು ಹಾವಿನ ತಲೆ ಮತ್ತು ಬಾಲವನ್ನು ಹಿಡಿದಿರುವುದನ್ನು ಕಾಣಬಹುದು. ಇನ್ನೊಂದು ಮಗು ಅದರ ಮೇಲೆ ಹಾರುತ್ತದೆ. ಈ ವೇಳೆ ಮಹಿಳೆಯೊಬ್ಬಳ ಧ್ವನಿಯು ಸಹ ಕೇಳಿಸುತ್ತದೆ. ಸುಮಾರು ಆರು ಮಕ್ಕಳು ಹಾವಿನೊಂದಿಗೆ ಆಟವಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ವಿಡಿಯೋ ರೆಕಾರ್ಡ್ ಮಾಡುತ್ತಿರುವ ಮಹಿಳೆ ಹಾವನ್ನು ತನಗೆ ತೋರಿಸುವಂತೆ ಮಕ್ಕಳನ್ನು ಕೇಳುತ್ತಾಳೆ. ಈ ವೇಳೆ ಮಕ್ಕಳು ಹಾವನ್ನು ನೆಲದ ಮೇಲೆ ಇಡುತ್ತಾರೆ. ಮಕ್ಕಳು ಸತ್ತ ಹೆಬ್ಬಾವನ್ನು ಹಗ್ಗವಾಗಿ ಬಳಸಿದ್ದು, ಹುಡುಗರಲ್ಲಿ ಒಬ್ಬ ಅದು ಕಪ್ಪು ತಲೆಯ ಹಾವು ಎಂದು ಹೇಳುತ್ತಾನೆ.

ಮಕ್ಕಳಿಗೆ ಆ ಹಾವು ಎಲ್ಲಿಂದ ಸಿಕ್ಕಿತು? ಅಥವಾ ಅವರು ಹಾವನ್ನು ಹಿಡಿದಾಗ ಅದು ಜೀವಂತವಾಗಿತ್ತೇ ಎಂಬುದು ಸ್ಪಷ್ಟವಾಗಿಲ್ಲ. ಘಟನೆಯ ವಿಡಿಯೋ ಈಗಾಗಲೇ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಇದನ್ನು ಟೀಕಿಸುತ್ತಿದ್ದಾರೆ. ಕೆಲವರು ಘಟನೆಯ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಕೆಲವರು ಸತ್ತ ಹಾವಿನ ಜತೆ ಈ ರೀತಿ ಆಡಬಾರದು ಮತ್ತು ಅದನ್ನು ಸುಡಬೇಕು ಎಂದು ಕಾಮೆಂಟ್​ ಮಾಡಿದ್ದಾರೆ.

ಈ ವೈರಲ್​ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net