ದರಪಟ್ಟಿಗಿಂತ ಕಡಿಮೆ ದರ ನಮೂದಿಸಿದ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ

PWD001
Published on

ಬೆಂಗಳೂರು:
ನಿರ್ವಹಣಾ ಕಾಮಗಾರಿಗಳಲ್ಲಿ ದರಪಟ್ಟಿಗಿಂತ ಕಡಿಮೆ ಗುತ್ತಿಗೆದರಗಳನ್ನು ನಮೂದಿಸುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ಮಾಡಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಶೇ.10ರಷ್ಟು ಕಾಮಗಾರಿಗಳನ್ನು ಹಠತ್ತಾಗಿ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು ಎಂದು ತೀರ್ಮಾನಿಸಲಾಗಿದೆ.
ಕಡಿಮೆ ದರ ನಮೂದಿಸಿದ ಕಾಮಗಾರಿಗಳನ್ನು ಕಡ್ಡಾಯವಾಗಿ ಗುಣಭರವಸೆ ವೃತ್ತದ ಅಧೀಕ್ಷಕ ಇಂಜಿನೀಯರ್ ಹಾಗೂ ಸಂಬಂದಿಸಿದ ವೃತ್ತದ ಅಧೀಕ್ಷಕ ಇಂಜಿನೀಯರ್‌ಗಳು ಪರಿವೀಕ್ಷಣೆಗೊಂಡು ವರದಿ ನೀಡಿದ ಬಳಿಕವೇ ಬಿಲ್ ಗಳನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net